Ad

ಬೀದರ್ : ಆಂಗ್ಲ ಉಪನ್ಯಾಸಕ ಇಲ್ಲದ ಸರ್ಕಾರಿ ಪಿಯು ಕಾಲೇಜು

ಸರ್ಕಾರಿ ಪಿಯು ಬಾಲಕಿಯರ ವಿಜ್ಞಾನ ಕಾಲೇಜಿಗೆ ಹಲವು ವರ್ಷಗಳಿಂದ ಆಂಗ್ಲ ಭಾಷೆ ಉಪನ್ಯಾಸಕ ಹುದ್ದೆಯೇ ಮಂಜೂರು ಆಗಿಲ್ಲ.

ಚಿಟಗುಪ್ಪ: ಸರ್ಕಾರಿ ಪಿಯು ಬಾಲಕಿಯರ ವಿಜ್ಞಾನ ಕಾಲೇಜಿಗೆ ಹಲವು ವರ್ಷಗಳಿಂದ ಆಂಗ್ಲ ಭಾಷೆ ಉಪನ್ಯಾಸಕ ಹುದ್ದೆಯೇ ಮಂಜೂರು ಆಗಿಲ್ಲ. ವಿಜ್ಞಾನ ವಿಭಾಗವಿದ್ದರೂ ಆಂಗ್ಲ ಹಾಗೂ ಉರ್ದು ಬೋಧನೆಗೆ ನಿತ್ಯ ಸಮಸ್ಯೆಯಾಗುತ್ತಿದೆ. ಸರ್ಕಾರ ಅತಿಥಿ ಉಪನ್ಯಾಸಕ ಹುದ್ದೆಯೂ ನೇಮಿಸಿಲ್ಲ ಎಂದು ಪ್ರಾಚಾರ್ಯ ಮಾರುತರಡ್ಡಿ ಮಾಹಿತಿ ನೀಡಿದರು.

Ad
300x250 2

ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಿದ್ದು, ವಾಣಿಜ್ಯ, ಅರ್ಥಶಾಸ್ತ್ರ, ಸಮಾಜ ಶಾಸ್ತ್ರ, ಆಂಗ್ಲ, ಉರ್ದು ವಿಷಯಗಳ ಉಪನ್ಯಾಸಕರ ಹುದ್ದೆಗಳು ಖಾಲಿ ಇದ್ದು, ಪ್ರವೇಶ ಪಡೆಯಲು ವಿದ್ಯಾರ್ಥಿನಿಯರು ಹಿಂದೇಟು ಹಾಕುತ್ತಿದ್ದಾರೆ. ಎಲ್ಲರು ಪಿಯು ವಿಜ್ಞಾನ ಕಲಿಕೆ ನಂತರ ಸಿಇಟಿ ಅಥವಾ ನೀಟ್‌ ಪರೀಕ್ಷೆ ಬರೆಯಬೇಕು ಎಂದು ಬಯಸುತ್ತಾರೆ. ಆದರೆ, ಇಲ್ಲಿ ಉಪನ್ಯಾಸಕರ ಕೊರತೆ ಇರುವುದರಿಂದ ಪ್ರವೇಶಕ್ಕೆ ಕಷ್ಟವಾಗುತ್ತಿದೆ.

6 ಜನರಲ್ಲಿ ಇಬ್ಬರು ಮಾತ್ರ ಬೋಧಕರು: ಇಲ್ಲಿಯ ಸರ್ಕಾರಿ ಬಾಲಕರ ಪಿಯು ಕಾಲೇಜಿನಲ್ಲಿ ಆರು ಹುದ್ದೆಗಳಲ್ಲಿ ಇಬ್ಬರು ಮಾತ್ರ ಖಾಯಂ ಉಪನ್ಯಾಸಕರಿದ್ದು, ನಾಲ್ಕು ಹುದ್ದೆಗಳು ಖಾಲಿ ಇವೆ. ಹೀಗಾಗಿ ಪ್ರತಿ ವರ್ಷ ಕಡಿಮೆ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ.ವಿದ್ಯಾರ್ಥಿಗಳಿಗೆ ಶೌಚಾಲಯ ಅವಶ್ಯಕತೆಯಿದ್ದು ಕಳೆದ ಹಲವು ವರ್ಷಗಳಿಂದ ಕೆಟ್ಟಿದ್ದ ಶೌಚಾಲಯ ಇದುವರೆಗೂ ದುರಸ್ತಿಕೈಗೊಂಡಿಲ್ಲ ಎಂದು ಪ್ರಾಚಾರ್ಯ ಪ್ರೇಮಕುಮಾರ್‌ ನುಡಿಯುತ್ತಾರೆ.

ಆಟದ ಮೈದಾನವಿದ್ದರೂ ಉಪನ್ಯಾಸಕ ಹುದ್ದೆ ಖಾಲಿ: ತಾಲ್ಲೂಕಿನ ತಾಳಮಡಗಿ ಸರ್ಕಾರಿ ಪಿಯು ಕಾಲೇಜಿಗೆ ವಿಶಾಲವಾದ ಆಟದ ಮೈದಾನವಿದೆ. ಆದರೆ, ದೈಹಿಕ ಉಪನ್ಯಾಸಕ ಹುದ್ದೆ ಖಾಲಿಯಿದೆ. ಈ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶ ರಾಜ್ಯಾದ್ಯಂತ ಕಡಿಮೆ ಬಂದಿರುವ ಕಾರಣ ಇಲ್ಲಿಯೂ ಪಾಸಾದ ಮಕ್ಕಳ ಸಂಖ್ಯೆ ಕಡಿಮೆಯಿರುವುದರಿಂದ ಕಾಲೇಜಿಗೆ ಕಡಿಮೆ ಪ್ರವೇಶ ಬಂದಿವೆ ಎಂದು ಪ್ರಾಚಾರ್ಯ ಹನುಮಂತ ಹೇಳುತ್ತಾರೆ

Ad
Ad
Nk Channel Final 21 09 2023
Ad