Bengaluru 22°C
Ad

ಕ್ವಾರಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಲ್ಲಿ ಮುಳಗಿ ಸಾವು :

ಕ್ವಾರಿಯಲ್ಲಿ ಈಜಲು ತೆರೆಳಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಬೆಟ್ಟಹಲಸೂರಿನಲ್ಲಿ ನಡೆದಿದೆ. ಮೊಹಮ್ಮದ್ (18), ಉಹೇಸ್ ಖಾನ್ (18) ಮೃತ ಯುವಕರು.

ದೇವನಹಳ್ಳಿ: ಕ್ವಾರಿಯಲ್ಲಿ ಈಜಲು ತೆರೆಳಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಸಾವನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಬೆಟ್ಟಹಲಸೂರಿನಲ್ಲಿ ನಡೆದಿದೆ. ಮೊಹಮ್ಮದ್ (18), ಉಹೇಸ್ ಖಾನ್ (18) ಮೃತ ಯುವಕರು.

ಸ್ನೇಹಿತರ ಜತೆ ಲಾಂಗ್ ಡ್ರೈವ್‌ ಬಂದಿದ್ದ 6 ಹುಡುಗರ ಪೈಕಿ ಮೂವರು ಯುವಕರು ಈಜಲು ಕ್ವಾರಿಗೆ ತೆರಳಿದ್ದರು. ಈ ವೇಳೆ ಈಜು ಬಾರದೆ ನೀರಿನಲ್ಲಿ ಮುಳುಗುತ್ತಿದ್ದಾಗ ಒಬ್ಬ ಯುವಕನನ್ನು ರಕ್ಷಿಸಲಾಗಿದೆ. ಮತ್ತಿಬ್ಬರು ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದಿದ್ದಾರೆ.

ನೆನ್ನೆ ಸಂಜೆ ಒಬ್ಬ ಯುವಕನ ಶವವನ್ನು ಅಗ್ನಿಶಾಮಕ ದಳ ಸಿಬ್ಬಂದಿ ಹೊರ ತೆಗೆದಿದ್ದಾರೆ. ಮತ್ತೊಬ್ಬ ಯುವಕನ ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ. ಕುಟುಂಬಸ್ಥರು ಮತ್ತು ಚಿಕ್ಕಜಾಲ ಪೊಲೀಸರು ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.

Ad
Ad
Nk Channel Final 21 09 2023
Ad