Bengaluru 29°C
Ad

ಇಂದಿನಿಂದ ದೇಶದಲ್ಲಿ 3 ಹೊಸ ಕಾನೂನುಗಳು ಜಾರಿ: ಝೀರೋ ಎಫ್ಐಆರ್!

ದೇಶದಲ್ಲಿ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜಾರಿಯಾಗಿವೆ. ಬ್ರಿಟಿಷರ ಕಾಲದಲ್ಲಿದ್ದ ಐಪಿಸಿ, ಸಿಆರ್​ಪಿಸಿ ಮತ್ತು ಎವಿಡೆನ್ಸ್ ಆ್ಯಕ್ಟ್ ಗಳು ಬದಲಾವಣೆ ಆಗಿವೆ.

ಬೆಂಗಳೂರು: ದೇಶದಲ್ಲಿ ಮೂರು ಹೊಸ ಕ್ರಿಮಿನಲ್ ಕಾನೂನುಗಳು ಜಾರಿಯಾಗಿವೆ. ಬ್ರಿಟಿಷರ ಕಾಲದಲ್ಲಿದ್ದ ಐಪಿಸಿ, ಸಿಆರ್​ಪಿಸಿ ಮತ್ತು ಎವಿಡೆನ್ಸ್ ಆ್ಯಕ್ಟ್ ಗಳು ಬದಲಾವಣೆ ಆಗಿವೆ.

Ad
300x250 2

IPC ಬದಲಿಗೆ BNS, CRPC ಬದಲಿಗೆ BNSS ಹಾಗೂ ಇಂಡಿಯನ್ ಎವಿಡೆನ್ಸ್ ಆ್ಯಕ್ಟ್ ಬದಲಿಗೆ ಬಿಎಸ್ಎ ಕಾಯ್ದೆಗಳು ಜಾರಿಯಾಗಿದೆ. ಈ ಕಾಯ್ದೆಯಲ್ಲಿ ಪ್ರಮುಖ ಅಂಶಗಳನ್ನು ಬದಲಾವಣೆ ಆಗಿವೆ. ಜೊತೆಗೆ ಕೆಲವು ಹೊಸ ವಿಚಾರಗಳನ್ನೂ ಸೇರಿಸಲಾಗಿದೆ. ನೂತನ ಕಾನೂನು ಶಿಕ್ಷೆಗಿಂತ ಹೆಚ್ಚು ನ್ಯಾಯಕ್ಕೆ ಕೇಂದ್ರಿಕೃತವಾಗಿದೆ.

ಝೀರೋ ಎಫ್ಐಆರ್ ಕಾನ್ಸೆಪ್ಟ್​ ಮೂಲಕ ದೇಶದ ಯಾವುದೇ ಮೂಲೆಯಿಂದಲೂ ಆನ್​​ಲೈನ್ ಸಹಾಯದಿಂದ ಪೊಲೀಸರಿಗೆ ದೂರು ನೀಡಬಹುದು. ಆನ್​​ಲೈನ್​​ನಲ್ಲಿ ದೂರು ನೀಡಿದ ಮೂರು ದಿನಗಳ ಒಳಗೆ ಠಾಣೆಗೆ ಹೋಗಿ ಸಹಿ ಮಾಡಿ ಎಫ್ಐಆರ್ ದಾಖಲಿಸಿಕೊಳ್ಳಬೇಕು. ಇಲ್ಲಿ ಉಚಿತವಾಗಿ ಎಫ್ಐಆರ್ ಪಡೆದುಕೊಳ್ಳಬಹುದು.

ಹೊಸ ಕಾನೂನಿನಲ್ಲಿ ಸಂತ್ರಸ್ತರಿಗೆ ಮಾಹಿತಿ ಪಡೆಯುವ ಹಕ್ಕು ಕೂಡ ನೀಡಲಾಗಿದೆ. ದೂರಿನ ಬಗ್ಗೆ 90 ದಿನಗಳಲ್ಲಿ ತನಿಖೆ ಪ್ರಗತಿ ತಿಳಿಯಬಹುದು. ಆಗಿರುವ ಹಾನಿಗೆ ಪರಿಹಾರವನ್ನೂ ಕೇಳುವ ಅವಕಾಶ ಇದೆ.

ಪೊಲೀಸರು 15 ದಿನಕ್ಕೊಮ್ಮೆ ಜಡ್ಜ್​ಗೆ ರಿಪೋರ್ಟ್ ಸಲ್ಲಿಕೆ ಮಾಡಬೇಕು. ಬಂದಿರುವ ದೂರು, FIR ಮತ್ತು NCR ವರದಿಗಳ ಬಗ್ಗೆ ಜಡ್ಜ್​ ರಿಪೋರ್ಟ್​ನಲ್ಲಿ ಮಾಹಿತಿ ನೀಡಬೇಕು. ಕೇಸ್ ದಾಖಲಾದ 60 ದಿನದಲ್ಲಿ ಪೊಲೀಸರು ಪ್ರಾಥಮಿಕ ತನಿಖೆಯನ್ನು ಮುಗಿಸಬೇಕು. 90 ದಿನದಲ್ಲಿ ತನಿಖೆ ಏನಾಗಿದೆ ಎಂದು ದೂರುದಾರರಿಗೆ ತಿಳಿಸಬೇಕು. ಸೀಜ್ ಏನಾದರೂ ಆಗಿದ್ದರೆ 48 ದಿನಗಳಲ್ಲಿ ಜಡ್ಜ್​​ಗೆ ವರದಿ ನೀಡಬೇಕು.

ಮ್ಯಾಜಿಸ್ಟೇಟ್ ಜಡ್ಜ್ ಅನುಮತಿ ಪಡೆದು ಬಂಧನ ಮಾಡಬೇಕು. ಅದರಲ್ಲೂ ಎಲ್ಲಾ ಪೊಲೀಸರು ಬಂಧಿಸುವಂತಿಲ್ಲ. ಬಂಧಿಸಬೇಕಾದರೆ ಡಿವೈಎಸ್ಪಿ ಱಂಕ್ ಅಧಿಕಾರಿಗಳು ಮಾತ್ರ ಅರೆಸ್ಟ್ ಮಾಡಬೇಕು. 7 ವರ್ಷ ಮೇಲ್ಪಟ್ಟ ಕೇಸ್​ನಲ್ಲಿ ಪೋರೆನ್ಸಿಕ್ ಕಡ್ಡಾಯವಾಗಿದೆ. ತನಿಖೆಯ ವೇಳೆ ವಿಡಿಯೋ ಗ್ರಾಫ್ ಕಡ್ಡಾಯ ಮಾಡಲಾಗಿದೆ. ತನಿಖೆಯ ವೇಳೆ ಸಾಕ್ಷಿಗಳನ್ನು ದಾಖಲಿಸಲು ಇಲ್ಲಿ ಅವಕಾಶ ಇದೆ.

Ad
Ad
Nk Channel Final 21 09 2023
Ad