Bengaluru 22°C
Ad

ರಾಜ್ಯಸಭೆಯ ಭಾಷಣದಲ್ಲಿ ʼಗರ್ಭಕಂಠದ ಕ್ಯಾನ್ಸರ್ ಲಸಿಕೆʼ ಕುರಿತು ಸುಧಾಮೂರ್ತಿ ಮನವಿ

Sudha

ನವದೆಹಲಿ: ತಮ್ಮ 74ರ ಹರೆಯದಲ್ಲಿ ರಾಜ್ಯಸಭಾ ಸದಸ್ಯರಾಗಿ ರಾಜಕೀಯದಲ್ಲಿ ಹೊಸ ಇನ್ನಿಂಗ್ಸ್ ಶುರು ಮಾಡಿರುವ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿಯವರು ರಾಜ್ಯಸಭೆಯಲ್ಲಿ ತಮ್ಮ ಚೊಚ್ಚಲ ಭಾಷಣ ಮಾಡಿದರು. ಈ ವೇಳೆ ಅವರು ಮಹಿಳೆಯರ ಆರೋಗ್ಯ ಹಾಗೂ ದೇಶಿಯ ಪ್ರವಾಸೋದ್ಯಮದ ಬಗ್ಗೆ ಉತ್ತೇಜಿಸುವ ಬಗ್ಗೆ ಮಾತನಾಡಿದರು.

Ad
300x250 2

ದೇಶದಲ್ಲಿ ಪ್ರತಿವರ್ಷ ಗರ್ಭಕಂಠದ ಕಾನ್ಸರ್‌ನಿಂದಾಗಿ ಸಾವಿರಾರು ಮಹಿಳೆಯರು ಉಸಿರು ಚೆಲ್ಲುತ್ತಿದ್ದಾರೆ. ಈ ವಿಚಾರವನನ್ಉ ಗಂಭೀರವಾಗಿ ಪರಿಗಣಿಸಿರುವ ಸುಧಾಮೂರ್ತಿಯವರು, ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಸರ್ಕಾರದ ಪ್ರಾಯೋಜಕತ್ವದಲ್ಲಿ ಲಸಿಕೆ ಕಾರ್ಯಕ್ರಮ ನಡೆಸುವಂತೆ ಮನವಿ ಮಾಡಿದರು. ರಾಷ್ಟ್ರಪತಿಗಳ ವಂದನಾ ನಿರ್ಣಯದ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಸುಧಾಮೂರ್ತಿ, ಇದರ ಜೊತೆಗೆ ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸುವಂತೆ ಮನವಿ ಮಾಡಿದರು.

ರಾಜ್ಯಸಭೆಯಲ್ಲಿ ಮೊದಲ ಭಾಷಣ ಮಾಡಿದ ಅವರು, ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು 9 ರಿಂದ 14 ವರ್ಷದ ಹೆಣ್ಣುಮಕ್ಕಳಿಗೆ ಲಸಿಕೆಯೊಂದನ್ನು ಕೊಡಲಾಗುತ್ತದೆ. ಪ್ರಸ್ತುತ ಇದರ ಬೆಲೆ 1,400 ರೂಪಾಯಿ ಇದ್ದು, ಸರ್ಕಾರದ ಮಧ್ಯಪ್ರವೇಶದಿಂದ ಇದನ್ನು 700 ರಿಂದ 800ಕ್ಕೆ ಇಳಿಕೆ ಮಾಡಿದರೆ ಅನೇಕರಿಗೆ ಸಹಾಯವಾಗುತ್ತದೆ. ಕೋವಿಡ್ ಸಂದರ್ಭದಲ್ಲಿ ನಡೆಸಿದಂತೆ ಇದಕ್ಕೆ ಸಂಬಂಧಿಸಿದ ಲಸಿಕಾ ಕಾರ್ಯಕ್ರಮ ಆಯೋಜಿಸಬೇಕು ಎಂದು ಮನವಿ ಮಾಡಿದರು.

ಜೊತೆಗೆ ಭಾರತದ 42 ಸ್ಥಳಗಳನ್ನು ವಿಶ್ವ ಪಾರಂಪರಿಕ ತಾಣಗಳೆಂದು ಗುರುತಿಸಲಾಗಿದೆಯಾದರೂ 57 ಜಾಗಗಳಿಗೆ ಆ ಸ್ಥಾನ ಸಿಗುವುದು ಬಾಕಿಯಿದೆ. ಅವುಗಳ ಅಭಿವೃದ್ಧಿಯ ಬಗ್ಗೆ ಗಮನ ಹರಿಸಿ ಪ್ರವಾಸೋದ್ಯಮವನ್ನೂ ಉತ್ತೇಜಿಸಬೇಕು ಎಂದು ಮನವಿ ಮಾಡಿದರು.

Ad
Ad
Nk Channel Final 21 09 2023
Ad