News Karnataka Kannada
Tuesday, April 30 2024
ರಾಮನಗರ

6 ವರ್ಷದಲ್ಲಿ ಹಸೆಮಣೆ ಏರಿದ 64 ಬಾಲಕಿಯರು: ಎಲ್ಲಿ ಗೊತ್ತ ?

ಜಿಲ್ಲೆಯಲ್ಲಿ ಕಳೆದ ಆರು ವರ್ಷಗಳಲ್ಲಿ ಸುಮಾರು 64 ಬಾಲ್ಯವಿವಾಹಗಳು ವರದಿಯಾಗಿವೆ. ಸಂಸಾರ ಮತ್ತು ಕುಟುಂಬದ ಕಲ್ಪನೆಯೇ ಗೊತ್ತಿಲ್ಲದ ಬಾಲಕ-ಬಾಲಕಿಯರನ್ನು ಈ ಆಧುನಿಕ ಕಾಲದಲ್ಲೂ ವಿವಾಹ ಬಂಧನಕ್ಕೆ ಒಳಪಡಿಸುವ ಪಿಡುಗು ಜಿಲ್ಲೆಯಲ್ಲಿ ಇಂದಿಗೂ ಜೀವಂತವಾಗಿದೆ
Photo Credit :

ರಾಮನಗರ: ಜಿಲ್ಲೆಯಲ್ಲಿ ಕಳೆದ ಆರು ವರ್ಷಗಳಲ್ಲಿ ಸುಮಾರು 64 ಬಾಲ್ಯವಿವಾಹಗಳು ವರದಿಯಾಗಿವೆ. ಸಂಸಾರ ಮತ್ತು ಕುಟುಂಬದ ಕಲ್ಪನೆಯೇ ಗೊತ್ತಿಲ್ಲದ ಬಾಲಕ-ಬಾಲಕಿಯರನ್ನು ಈ ಆಧುನಿಕ ಕಾಲದಲ್ಲೂ ವಿವಾಹ ಬಂಧನಕ್ಕೆ ಒಳಪಡಿಸುವ ಪಿಡುಗು ಜಿಲ್ಲೆಯಲ್ಲಿ ಇಂದಿಗೂ ಜೀವಂತವಾಗಿದೆ.

ವಿವಿಧ ಕಾರಣಗಳಿಗಾಗಿ ಬಾಲ್ಯವಿವಾಹ ಪ್ರಕರಣಗಳು ವರದಿಯಾಗುತ್ತಲೇ ಇವೆ. ಜಿಲ್ಲೆಯಲ್ಲಿ ಇಂತಹ ಘಟನೆಗಳಲ್ಲಿ ಏರಿಳಿತಗಳಾಗುತ್ತಿವೆಯೇ ಹೊರತು, ನಿಯಂತ್ರಣಕ್ಕೆ ಮಾತ್ರ ಬಂದಿಲ್ಲ.

‘ಜಿಲ್ಲೆಯಲ್ಲಿ ಎರಡು ವರ್ಷದಲ್ಲಿ (2022 ಮತ್ತು 2023ನೇ ವರ್ಷ) 125 ಬಾಲ್ಯವಿವಾಹ ಘಟನೆಗಳು ನಡೆದಿವೆ. ಈ ಪೈಕಿ, ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳ ತಂಡವು ಸಕಾಲದಲ್ಲಿ ಸ್ಥಳಕ್ಕೆ ತೆರಳಿ ಸುಮಾರು 97 ಬಾಲ್ಯವಿವಾಹಗಳಿಗೆ ತಡೆಯೊಡ್ಡಿದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ತಿಳಿಸಿದ್ದಾರೆ. ಇನ್ನು ‘ಕೆಲವರು ಗರ್ಭಿಣಿಯರಾದ ಬಳಿಕವೇ ಅವರು ಬಾಲ್ಯವಿವಾಹವಾಗಿರುವುದು ಗೊತ್ತಾಗುತ್ತದೆ.

ಆಸ್ಪತ್ರೆಗೆ ಬಂದಾಗ ಬೆಳಕಿಗೆ ಬರುವ ಇಂತಹ ಘಟನೆ ಕುರಿತು ಅಲ್ಲಿನ ಸಿಬ್ಬಂದಿ ನೀಡುವ ಮಾಹಿತಿ ಮೇರೆಗೆ, ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ’ ಎಂದು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು