ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ನನ್ನ ನಡುರಸ್ತೆಯಲ್ಲೇ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೌದು. . ಇದಕ್ಕೆ ಸಂಬಂಧಿಸಿದ ಫೋಟೊವೊಂದು ವೈರಲ್ ಆಗ್ತಿದೆ. ಭೀಮ ಶೂಟಿಂಗ್ ಕ್ಲೈಮ್ಯಾಕ್ಸ್ನಲ್ಲಿ ಬ್ಲ್ಯಾಕ್ ಕೋಬ್ರಾನನ್ನು ಅರೆಸ್ಟ್ ಮಾಡುವ ದೃಶ್ಯ ಸನ್ನಿವೇಶವಿದ್ದು, ಈ ಶೂಟಿಂಗ್ ದೃಶ್ಯವನ್ನು ಕಂಡ ವಿಜಯ್ ಫ್ಯಾನ್ಸ್ ಸಂತಸಗೊಂಡಿದ್ದಾರೆ.
ಬೆಂಗಳೂರಿನ ವಿನೋವಾ ನಗರದ ಗಲ್ಲಿಗಳಲ್ಲಿ ದುನಿಯಾ ವಿಜಯ್ ನಟನೆಯ ಭೀಮ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆದಿದ್ದು, ಕಳೆದ ದಿನ ರಾತ್ರಿ ಕೊನೆ ದಿನದ ಶೂಟಿಂಗ್ ಮುಕ್ತಾಯವಾಗಿದೆ. ದುನಿಯಾ ವಿಜಿಯನ್ನ ಪೊಲೀಸರು ಅರೆಸ್ಟ್ ಮಾಡುವ ದೃಶ್ಯದ ಚಿತ್ರೀಕರಣ ಮಾಡಲಾಗಿದ್ದು, ನೂರಾರು ಜನಗಳ ಮಧ್ಯೆನೇ ನಿಜವಾದ ರೀತಿಯಲ್ಲೇ ದೃಶ್ಯದ ಚಿತ್ರೀಕರಣ ಮಾಡಲಾಗಿದೆ.
ಇನ್ನು ದುನಿಯಾ ವಿಜಯ್ ನಿರ್ದೇಶನದಲ್ಲಿ ಭೀಮ ಸಿನಿಮಾ ಮೂಡಿಬರುತ್ತಿದೆ. 2ನೇ ಬಾರಿ ಈ ನಟ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಅಂದಹಾಗೆಯೇ ಈ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.