News Karnataka Kannada
Monday, May 13 2024
ಬೆಂಗಳೂರು

ಬೆಂಗಳೂರಿನಲ್ಲಿ ಆಕರ್ಷಣೆಯ ‘ನಮ್ಮ ಸರಸ್ ಮೇಳ’

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ವತಿಯಿಂದ ಮಹಿಳೆಯರ ಸಬಲೀಕರಣ, ಸ್ವಾವಲಂಬನೆ ದೃಷ್ಟಿಯಿಂದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ಮಹಿಳೆಯರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ 'ನಮ್ಮ ಸರಸ್ ಮೇಳ-2024' ಹಮ್ಮಿಕೊಳ್ಳಲಾಗಿದೆ.
Photo Credit : By Author

ಬೆಂಗಳೂರು: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ವತಿಯಿಂದ ಮಹಿಳೆಯರ ಸಬಲೀಕರಣ, ಸ್ವಾವಲಂಬನೆ ದೃಷ್ಟಿಯಿಂದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ರಾಷ್ಟ್ರೀಯ ಜೀವನೋಪಾಯ ಅಭಿಯಾನದಡಿ ಮಹಿಳೆಯರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ‘ನಮ್ಮ ಸರಸ್ ಮೇಳ-2024’ ಹಮ್ಮಿಕೊಳ್ಳಲಾಗಿದೆ.

ಫೆಬ್ರವರಿ 29ರಿಂದ ಮೇಳ ಆರಂಭವಾಗಿದ್ದು ಮಾರ್ಚ್ 09ರವರೆಗೆ ಹತ್ತು ದಿನಗಳ ಕಾಲ ನಡೆಯಲಿದೆ. ಈ ಮೇಳವನ್ನು ಮೂರನೇ ಬಾರಿಗೆ ಹಮ್ಮಿಕೊಳ್ಳಲಾಗುತ್ತಿದೆ. ಈ ಮೇಳದಲ್ಲಿ ದೇಶದ 250 ಸ್ವಸಹಾಯ ಗುಂಪುಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ.

ದೇಶದ ವಿವಿಧ ರಾಜ್ಯಗಳಿಂದ ಹಾಗೂ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಿಂದ ತನ್ನದೇ ಕಲೆ, ಕೌಶಲ್ಯಗಳ ಮೂಲಕ ತಯಾರಾಗುವ ಆಟದ ಸಾಮಾನುಗಳು, ಮರದ ಗೊಂಬೆಗಳು, ಸೀರೆಗಳು, ಆಕರ್ಷಣೆಯ ಬಟ್ಟೆಗಳು, ಕಸೂತಿಗಳು, ನಾರಿನ ಉತ್ಪನ್ನದ ವಸ್ತುಗಳು, ಮಸಾಲ ಪದಾರ್ಥಗಳು, ಸಿರಿಧಾನ್ಯ ಉತ್ಪನ್ನಗಳು, ಮೌಲ್ಯವರ್ಧಿತ ಕರಾವಳಿ ಉತ್ಪನ್ನಗಳು, ಬಾಳೆ ನಾರಿನಿಂದ ಉತ್ಪಾದಿಸಿದ ಉತ್ಪನ್ನಗಳು, ಗೃಹಾಲಂಕಾರಿಕ ವಸ್ತುಗಳು, ಆಯುರ್ವೇದ ಔಷಧಿಗಳು, ಪಾರಂಪರಿಕ ವಸ್ತುಗಳು, ಗೃಹೋಪಯೋಗಿ ವಸ್ತುಗಳು, ನವೀನ ವಿನ್ಯಾಸದ ಆಭರಣಗಳು ಸೇರಿದಂತೆ ವಿವಿಧ ಬಗೆಯ ತಿಂಡಿ-ತಿನಿಸುಗಳು, ಈ ಮೇಳದಲ್ಲಿ ಮಾರಾಟ ಮಾಡಲಾಗುತ್ತಿದೆ.

ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಕರಕುಶಲ ಉದ್ಯಮದ ವಸ್ತುಗಳು, ವಿವಿಧ ಖಾದ್ಯಗಳು, ಆಹಾರ ಮೌಲ್ಯವರ್ಧಕ ವಸ್ತುಗಳ ಮಳಿಗೆಗಳು ಇದ್ದು, ಸಾಂಪ್ರದಾಯಕ ಕಲೆಗಳಾದ ಕಸೂತಿ, ಮೇಕೆ ಚರ್ಮದ ಮೇಲಿನ ಆಕರ್ಷಕ ಬಣ್ಣದ ಚಿತ್ತಾರಗಳು, ಬಿದಿರಿನಿಂದ ಮೂಡಿಬಂದ ಕಲಾಕೃತಿಗಳು ಇಳಕಲ್ ಸೀರೆ, ರೇಷ್ಮೆ ಸೀರೆ, ಉತ್ತರ ಕರ್ನಾಟಕದ ಕುರಿ ಉಣ್ಣೆಯ ಉತ್ಪನ್ನಗಳಾದ ಶಾಲು, ಟೋಪಿ ಮತ್ತು ಇತರೆ ಪದಾರ್ಥಗಳು ಮನಸೆಳೆಯುತ್ತಿದೆ.

ಮಾರ್ಚ್ 04ರಂದು ಎನ್‌ಆರ್‌ಎಲ್‌ಎಂ ವತಿಯಿಂದ ಉತ್ಪನ್ನಗಳ ಮೌಲ್ಯ ಮತ್ತು ಸರಪಳಿ ವಿಧಾನಗಳ ಬಗ್ಗೆ ಶಿಬಿರ ಏರ್ಪಡಿಸಲಾಗಿದೆ. ಇದರೊಂದಿಗೆ, ಪೂರ್ವ ವಲಯ ಸ್ವ-ಸಹಾಯ ಗುಂಪುಗಳ ಸದಸ್ಯರು ಹಾಗೂ ಎನ್‌ಎಲ್‌ಎಂ ತಂಡವು ಫ್ಯಾಷನ್ ಶೋ, ಮೈಮ್, ಜಾನಪದ ನೃತ್ಯಗಳ ಪ್ರದರ್ಶನ ನೀಡಲಿದ್ದಾರೆ.

ಮಾರ್ಚ್ 05ರಂದು ಉತ್ಪನ್ನಗಳ ಸಿದ್ಧಪಡಿಸುವಿಕೆ ವಿಧಾನಗಳು, ಬ್ರಾಂಡಿಂಗ್ ಹಾಗೂ ಮಾರುಕಟ್ಟೆ ವಿಸ್ತರಣೆ ಮತ್ತು ಅಭಿವೃದ್ಧಿಯ ಬಗ್ಗೆ ನ್ಯಾನೋ ಮೀಡಿಯಾ ಮತ್ತು ಎಎನ್ಎಟಿಎಸ್ ಸ್ಕಿಲ್ ಸಂಸ್ಥೆ ನಡೆಸಿಕೊಡಲಿದೆ. ಫ್ಯಾಷನ್ ಶೋ. ಮೈಮ್, ಜಾನಪದ ನೃತ್ಯವನ್ನು ಸ್ವ-ಸಹಾಯ ಗುಂಪುಗಳ ಮಹಿಳಾ ಸದಸ್ಯರು ಮತ್ತು ಇಂಡಿಯನ್ ಇನ್ಸ್‌ಟಿಟ್ಯೂಟ್ ಫ್ಯಾಷನ್ ಸಂಸ್ಥೆಯವರು ಪ್ರದರ್ಶನ ನೀಡಲಿದ್ದಾರೆ.

ಮಾರ್ಚ್ 06ರಂದು ಪಶುಪಾಲನೆ ಜೀವನೋಪಾಯದ ಸುಸ್ಥಿರ ಬದುಕು ಮತ್ತು ಸಮುದಾಯದ ಸಹಭಾಗಿತ್ವದ ಬಗ್ಗೆ ತರಬೇತಿ ನೀಡಲಾಗುತ್ತದೆ. ಆರ್.ವಿ. ಪದವಿ ಕಾಲೇಜು ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನೀಡಲಿದ್ದಾರೆ.

ಮಾರ್ಚ್ 07ರಂದು ಬ್ಯಾಂಕಿಂಗ್ ವ್ಯವಹಾರದ ಬಗ್ಗೆ, ಹಣಕಾಸು ನಿರ್ವಹಣೆ ಮತ್ತು ವಿಧಾನಗಳ ಬಗ್ಗೆ ಎಸ್‌ಆರ್‌ಎಲ್‌ಎಂ ತಂಡ ಹಾಗೂ ಬ್ಯಾಂಕ್ ಮುಖ್ಯಸ್ಥರು ನಡೆಸಿಕೊಡಲಿದ್ದಾರೆ. ರಾಜೀವ್ ಗಾಂಧಿ ನರ್ಸಿಂಗ್ ಕಾಲೇಜು ಮತ್ತು ವೈದ್ಯಕೀಯ ಸಂಸ್ಥೆಯ ಫ್ಯಾಷನ್ ವಿಭಾಗದವರು ಫ್ಯಾಷನ್ ಶೋ, ಜಾನಪದ ಪ್ರದರ್ಶನ ನಡೆಯಲಿದೆ.

ಮಾರ್ಚ್ 08ರಂದು ಆನ್‌ಲೈನ್ ಮಾರುಕಟ್ಟೆ, ವಹಿವಾಟು, ಉತ್ಪನ್ನಗಳ ಆಕರ್ಷಕ ಮಾರಾಟದ ಬಗ್ಗೆ ಸಂವಾದ ಏರ್ಪಡಿಸಲಾಗಿದೆ. ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಉಡುಪಿ ಸ್ವ-ಸಹಾಯ ಗುಂಪುಗಳ ಮಹಿಳೆಯರು ಯಕ್ಷಗಾನ, ಹುಲಿ ಕುಣಿತ, ಕಂಗೀಲು, ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಮಾರ್ಚ್ 09ರಂದು ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿಗಳ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು