News Karnataka Kannada
Thursday, May 09 2024
ಬೆಂಗಳೂರು

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಆರೋಪಿಗಳ ಆಸ್ತಿ ಜಪ್ತಿಗೆ ಸಜ್ಜಾದ ಎನ್ ಐಎ

NIA
Photo Credit : IANS

ಬೆಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳು ಅಧಿಕಾರಿಗಳ ಮುಂದೆ ಶರಣಾಗಲು ವಿಫಲರಾದ ಕಾರಣ ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಸಜ್ಜಾಗಿದೆ ಎಂದು ತಿಳಿದು ಬಂದಿದೆ. ಕಂದಾಯ ಇಲಾಖೆ ಮತ್ತು ಇತರ ಮೂಲಗಳಿಂದ ಆರೋಪಿಗಳ ಚರಾಸ್ತಿ ಮತ್ತು ಸ್ಥಿರಾಸ್ತಿಗಳ ವಿವರಗಳನ್ನು ಎನ್ ಐಎ ಸಂಗ್ರಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಆರೋಪಿಗಳ ಶರಣಾಗತಿಗೆ ಜೂನ್ 30 ರವರೆಗೆ ಎನ್ ಐಎ ಗಡುವು ನೀಡಿತ್ತು.

ಅಲ್ಲದೆ ಸುಳ್ಯ ಮತ್ತು ಬೆಳ್ಳಾರೆ ಪಟ್ಟಣಗಳಲ್ಲಿ ಈ ಬಗ್ಗೆ ಎನ್ ಐಎ ಅಧಿಕಾರಿಗಳು ಮೈಕ್ ಮೂಲಕ ಘೋಷಣೆ ಮಾಡಿದ್ದರು. ನೋಟಿಸ್ ಗಳನ್ನು ಆರೋಪಿಗಳ ನಿವಾಸಗಳ ಮೇಲೆ ಅಂಟಿಸಲಾಗಿದೆ ಮತ್ತು ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಆರೋಪಿಗಳ ಬಗ್ಗೆ ಪೊಲೀಸರಿಗೆ ಸುಳಿವು ನೀಡಿದವರಿಗೆ ನಗದು ಬಹುಮಾನದ ಘೋಷಣೆಯನ್ನೂ ಅಧಿಕಾರಿಗಳು ಮಾಡಿದ್ದರು. ನೆಟ್ಟಾರು ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಕಲ್ಲುಮುಟ್ಲು ನಿವಾಸಿಗಳಾದ ಉಮರ್ ಫಾರೂಕ್ ಮತ್ತು ಮುಸ್ತಫಾ ಪೈಚಾರ್ ಅವರು ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಅವರನ್ನು ಬಂಧಿಸಲು ಎನ್ ಐಎ ಕಾರ್ಯಾಚರಣೆ ಆರಂಭಿಸಿದ್ದರೂ ಇಲ್ಲಿಯವರೆಗೆ ನಿಗೂಢವಾಗಿಯೇ ಉಳಿದಿದ್ದಾರೆ.  ಹೀಗಾಗಿ ಆರೋಪಿಗಳ ಶರಣಾಗತಿಗೆ ಗಡುವು ಮುಗಿದಿದ್ದು, ಆಸ್ತಿ ಜಪ್ತಿಗೆ ಎನ್ ಐ ಎ ಮುಂದಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು