ಬೆಂಗಳೂರು: ತಾಯಿಯನ್ನು ಕೊಂದು ಸೂಟ್ಕೇಸ್ನಲ್ಲಿ ಶವ ಹೊತ್ತುಕೊಂಡು ಮಗಳು ಪೊಲೀಸ್ ಠಾಣೆಗೆ ಬಂದು ಆತಂಕ ಸೃಷ್ಟಿಸಿರುವ ಘಟನೆ ನಗರದ ಮೈಕೊಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೆನಾಲಿ ಸೇನ್ (39) ಹೆತ್ತ ತಾಯಿಯನ್ನು ಕೊಲೆ ಮಾಡಿದಾಕೆ. ಬೀವಾ ಪಾಲ್ ಕೊಲೆಯಾದ ವೃದ್ಧೆ(70). ಸೆನಾಲಿ ಸೇನ್ ಅಮ್ಮ ಮತ್ತು ಅತ್ತೆ ಒಂದೇ ಮನೆಯಲ್ಲಿದ್ದರು. ಇಬ್ಬರೂ ದಿನಾ ಗಲಾಟೆ ಮಾಡಿಕೊಳ್ಳುತ್ತಿದ್ದರು. ಹೀಗೆ ಜಗಳಕ್ಕೆ ಬೇಸತ್ತಿದ್ದ ಬೀವಾ ಪಾಲ್ ನಿದ್ರೆ ಮಾತ್ರೆ ನುಂಗಿ ಸಾಯೋದಾಗಿ ಹೇಳಿದ್ದಾರೆ. ಮೊದಲೇ ತಾಯಿ ಹಾಗೂ ಅತ್ತೆಯ ಜಗಳದಿಂದ ಬೇಸತ್ತಿದ್ದ ಸೆನಾಲಿ ಸೇನ್ ಬೆದರಿಕೆಯಂತೆಯೇ ಮುಂಜಾನೆ ತನ್ನ ತಾಯಿಗೆ 90 ನಿದ್ರೆ ಮಾತ್ರೆ ನುಂಗಿಸಿದ್ದಾಳೆ.
ತಾಯಿ ಹೊಟ್ಟೆ ನೋವು ಎಂದಾಗ ವೇಲ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ. ಬಳಿಕ ಟ್ರ್ಯಾಲಿ ಸೂಟ್ಕೇಸ್ನಲ್ಲಿ ತಾಯಿ ಶವವಿಟ್ಟು ಸ್ಟೇಷನ್ಗೆ ಬಂದಿದ್ದಾಳೆ. ಸೂಟ್ಕೇಸ್ನಲ್ಲಿ ಮೃತದೇಹ ತಂದದ್ದನ್ನು ಕಂಡ ಪೊಲೀಸರು ಶಾಕ್ ಆಗಿದ್ದು, ಕೂಡಲೇ ಆರೋಪಿ ಸೋನಾಲಿ ಸೇನ್ ಅವರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.