Bengaluru 29°C
Ad

ಹಾಲಿನ ದರ ಹೆಚ್ಚಳ ಮಾಡೋದು ಸರ್ಕಾರ ಅಲ್ಲ : ಸಿಎಂ ಸಿದ್ದರಾಮಯ್ಯ

ಕೆಎಂಎಫ್‌ ನಿಂದ ಹಾಲಿನ ದರ ಏರಿಕೆ ಮಾಡಿರುವ ವಿಚಾರ ನನ್ನ ಗಮನಕ್ಕೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರು: ಕೆಎಂಎಫ್‌ ನಿಂದ ಹಾಲಿನ ದರ ಏರಿಕೆ ಮಾಡಿರುವ ವಿಚಾರ ನನ್ನ ಗಮನಕ್ಕೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕೆಎಂಎಫ್‌ನಿಂದ ಹಾಲಿನ ದರ ಏರಿಕೆ ವಿಚಾರವಾಗಿ ಗೃಹ ಕಚೇರಿ ಕೃಷ್ಣದಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ, ಹಾಲಿನ ದರ ಏರಿಕೆ ಬಗ್ಗೆ ನನಗೆ ಗೊತ್ತಿಲ್ಲ. ಕೆಎಂಎಫ್‌ ಅವರ ಜೊತೆ ಮಾತಾಡ್ತೀನಿ‌. ಹಾಲಿನ ದರ ಹೆಚ್ಚಳ ಮಾಡೋದು ಸರ್ಕಾರ ಅಲ್ಲ ಎಂದರು.

ಕೆಎಂಎಫ್‌ನವರು ಬೇರೆ ರಾಜ್ಯದ ದರ ನೋಡಿಕೊಂಡು ದರ ಹೆಚ್ಚಳ ಮಾಡುತ್ತಾರೆ. ಬೇರೆ ರಾಜ್ಯದ ದರಕ್ಕೆ ಹೋಲಿಕೆ ಮಾಡಿದರೆ ನಮ್ಮಲ್ಲಿ ಕಡಿಮೆ ಇದೆ. ಆದರೂ ದರ ಏರಿಕೆ ಮಾಡಿರುವುದರ ಬಗ್ಗೆ ನನಗೆ ಗೊತ್ತಿಲ್ಲ. ನಾನು ಕೆಎಂಎಫ್‌ ಅಧ್ಯಕ್ಷರ ಜೊತೆ ಮಾತನಾಡುತ್ತೇನೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳದ ನಂದಿನಿ ಹಾಲಿನ ದರ ಹೆಚ್ಚಿಸಲಾಗಿದೆ. ಹಾಲಿನ ದರ ಪ್ರತಿ ಲೀಟರ್‌ಗೆ 2.10 ರೂ. ಹೆಚ್ಚಳ ಮಾಡಲಾಗಿದೆ. ಪರಿಷ್ಕೃತ ದರ ನಾಳೆಯಿಂದಲೇ ಜಾರಿಗೆ ಬರಲಿದೆ.

Ad
Ad
Nk Channel Final 21 09 2023
Ad