Ad

ಸನಾತನ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ: ಸ್ಟಾಲಿನ್​​ಗೆ ಷರತ್ತುಬದ್ಧ ಬೇಲ್

Bail For Udayanidhi Stalin

ಬೆಂಗಳೂರು: ಸನಾತನ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡಿನ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್  ಅವರಿಗೆ ​​​ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ​​ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.

Ad
300x250 2

ಸನಾತನ ಧರ್ಮದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಉದಯನಿಧಿ ಸ್ಟಾಲಿನ್​ ಅವರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಪರಮೇಶ್​ ಸಲ್ಲಿಸಿದ್ದ ಅರ್ಜಿಯನ್ನು ಆಧರಿಸಿ ನ್ಯಾಯಾಲಯ ಅವರಿಗೆ ನೋಟಿಸ್​ ಜಾರಿ ಮಾಡಿತ್ತು. ಇಂದು (ಜೂ.25) ಉದಯನಿಧಿ ಸ್ಟಾಲಿನ್​ ನ್ಯಾಯಾಲಯಕ್ಕೆ ಜಾರಾಗಿದ್ದರು.

ಈ ವೇಳೆ ನ್ಯಾಯಾಲಯ ಪ್ರಕರಣದ ಉಳಿದ ಆರೋಪಿಗಳು ಎಲ್ಲಿ ಎಂದು ನ್ಯಾಯಾಧೀಶರ ಪ್ರಶ್ನೆ ಮಾಡಿದರು. ಇದಕ್ಕೆ ಉದಯನಿಧಿ ಸ್ಟಾಲಿನ್​ ಪರ ಹಿರಿಯ ವಕೀಲ ವಿಲ್ಸನ್ ಉತ್ತರಿಸಿ, ಉದಯನಿಧಿ ಸ್ಟಾಲಿನ್​ ಅವರಿಗೆ ಪ್ರಕರಣದಲ್ಲಿ ಖುದ್ದು ಹಾಜರಾತಿಯಿಂದ ವಿನಾಯಿತಿ‌ ನೀಡಬೇಕು. ದೇಶಾದ್ಯಂತ ಏಳು ಪ್ರಕರಣಗಳು ದಾಖಲಾಗಿವೆ. ಸ್ಟಾಲಿನ್​​ ಅವರು ಒಂದು ರಾಜ್ಯದ ಕ್ರೀಡಾ ಸಚಿವ. ಹೀಗಾಗಿ, ಅವರಿಗೆ ಖುದ್ದು ಹಾಜರಾತಿಯಿಂದ ವಿನಾಯಿತಿ‌ ನೀಡಬೇಕು. ಸುಪ್ರೀಂ ಕೋರ್ಟ್​ನಿಂದ ಅವರಿಗೆ ವಿನಾಯಿತಿ ಸಿಕ್ಕಿದೆ. ಇನ್ನೂ ಅದೇಶದ ಪ್ರತಿ ಲಭ್ಯವಾಗಿಲ್ಲ ಎಂದು ಮನವಿ ಮಾಡಿದರು.

Ad
Ad
Nk Channel Final 21 09 2023
Ad