ಬೆಂಗಳೂರು: ಖಾಕಿ ವೇಷಧರಿಸಿದ ನಕಲಿ ಪೊಲೀಸ್ ಓರ್ವ ಮಂಗಳಮುಖಿಯರಿಗೆ ಲೈಂಗಿಕವಾಗಿ ಕಿರುಕುಳ ನೀಡಿರುವುದಾಗಿ ಆರೋಪ ಕೇಳಿಬಂದಿದ್ದು ಆತನಿಂದ ರಕ್ಷಣೆ ನೀಡುವಂತೆ ಮಂಗಳಮುಖಿಯರು ಮನವಿ ಮಾಡಿದ್ದಾರೆ.
ಫೇಕ್ ಪೊಲೀಸ್ ರಾಮಾಂಜಿನಯ್ಯ ನಂಬರ್ ಪ್ಲೇಟ್ ಇಲ್ಲದ ಬೈಕ್ ತಂದು ನಾನು ಬಂದಾಗ ಮಾಮೂಲಿ ಕೊಡಬೇಕು. ಇಲ್ಲದಿದ್ದರೆ ತೊಂದರೆ ಕೊಡ್ತೇನೆಂದು ಬೆದರಿಕೆ ಹಾಕಿದ್ದಾರೆ. ಹೀಗಾಗಿ ರಕ್ಷಣೆ ನೀಡುವಂತೆ ಮಾದನಾಯಕನಹಳ್ಳಿ ಪೊಲೀಸರಿಗೆ ಮಂಗಳಮುಖಿಯರು ಮನವಿ ಮಾಡಿದ್ದಾರೆ.