Bengaluru 22°C
Ad

ದರ್ಶನ್ ಗಾಗಿ ಡಿವೋರ್ಸ್ ಬೇಕು ಎಂದಳು: ಪವಿತ್ರಾ ಗೌಡ ಮಾಜಿ ಪತಿ ಸಂಜಯ್ ಸಿಂಗ್

Sanjaysingh

ಬೆಂಗಳೂರು: ಇಲಿಯನ್ನು ಸಾಯಿಸಲು ಹಿಂಜರಿಯುತ್ತಿದ್ದ ಹುಡುಗಿ ಪವಿತ್ರಾ ಗೌಡ. ಅವಳು ಒಬ್ಬರನ್ನ ಕೊಲೆ ಮಾಡುತ್ತಾಳೆ ಅಂದ್ರೆ ಅದು ಸುಳ್ಳು ಎಂದು ಪವಿತ್ರಾ ಮಾಜಿ ಪತಿ ಸಂಜಯ್‌ ಸಿಂಗ್‌ ಹೇಳಿದ್ದಾರೆ.

ಉತ್ತರ ಪ್ರದೇಶ ಮೂಲದ ಸಂಜಯ್‌ ಸಿಂಗ್‌ ಮತ್ತು ಪವಿತ್ರಾ ಗೌಡ ಪ್ರೀತಿಸಿ ಮದುವೆಯಾಗಿದ್ದರು.

ಮಗಳು ಹುಟ್ಟಿದ ನಂತರ ಸಂಜಯ್‌ ಸಿಂಗ್‌ ಅವರನ್ನು ದೂರ ಮಾಡತೊಡಗಿದ ಪವಿತ್ರಾ ಗೌಡ ಕೊನೆಗೆ ಡಿವೋರ್ಸ್‌ ಮೂಲಕ ದೂರ ದೂರವಾಗಿದ್ದರು. ಇದೀಗ ದರ್ಶನ್ ಹಾಗೂ ಪವಿತ್ರಾ ಗೌಡ ಅರೆಸ್ಟ್ ಆದ ಬೆನ್ನಲ್ಲೇ ಸಂಜಯ್ ಮತ್ತೆ ಸುದ್ದಿಯಾಗಿದ್ದಾರೆ.

ಬೆಂಗಳೂರಿನಲ್ಲಿ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಂಜಯ್‌ ಸಿಂಗ್‌ ಸದ್ಯ ಉತ್ತರ ಪ್ರದೇಶದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಸದ್ಯ ಪತ್ನಿ ಅರೆಸ್ಟ್ ಆಗಿರುವ ಬಗ್ಗೆ ಸಂಜಯ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.

ನನ್ನದು ಮತ್ತು ಪವಿತ್ರಾ ಗೌಡ ಸಂಬಂಧ ಮುರಿದು ಬಿದ್ದು 12 ವರ್ಷ ಆಗಿದೆ. ಇವತ್ತು ನನಗೆ ಕೊಲೆ ಮಾಡಿದ ವಿಚಾರ ಗೊತ್ತಾಯಿತು. ಮಗಳ ಬಗ್ಗೆ ಯೋಚನೆ ಬಂತು. ಅದಕ್ಕೆ ಏನು ಅಂತ ಕೇಳೋಣ ಅಂದುಕೊಂಡೆ. ನಾನು ಅವರಿಗೆ ಫೋನ್ ಮಾಡಲ್ಲ. ಅವರ ಕಡೆಯಿಂದಲೂ ನನಗೆ ಯಾವುದೇ ಫೋನ್‌ ಬರಲ್ಲ.

2002 ರಲ್ಲಿ ನಾನು ಬೆಂಗಳೂರಿಗೆ ಬಂದಿದ್ದೆ. ಪವಿತ್ರಾ ಗೌಡ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಈ ವೇಳೆ ನಾವಿಬ್ಬರು ಪ್ರೀತಿಸಿ ಮದುವೆಯಾದೆವು.

ಮದುವೆಯಾಗಿ ಮೂರನೇ ವರ್ಷಕ್ಕೆ ಮಗಳು ಹುಟ್ಟಿದ್ದಳು. ಆಗ ಪವಿತ್ರ ಗೌಡ ಫಿಲ್ಮ್ ಇಂಡಸ್ಟ್ರಿ ಸೇರಿದ್ದಳು. ಆ ಬಳಿಕ ನಮ್ಮಿಬ್ಬರ ನಡುವೆ ಅಂತರ ಆರಂಭವಾಯ್ತು. ಆಮೇಲೆ ಅವಳು ನನ್ನ ಮೇಲೆ ಡಿವೋರ್ಸ್‌ ಕೇಸ್‌ ಫೈಲ್‌ ಮಾಡಿದಳು.

2013ರಲ್ಲಿ ನಮ್ಮ ಡಿವೋರ್ಸ್‌ ಆಯ್ತು. ಡಿವೋರ್ಸ್ ಮೊದಲೇ ನಾವಿಬ್ಬರು ಒಂದು ವರ್ಷ ಪ್ರತ್ಯೇಕವಾಗಿ ವಾಸಿಸುತ್ತಿದ್ದೆವು. ಗಂಡ ಹೆಂಡತಿ ಮಧ್ಯೆ ಕೆಲ ವಿಚಾರಕ್ಕೆ ಸಣ್ಣ ಸಣ್ಣ ಜಗಳ ಆಗುತಿತ್ತಿತ್ತು. ಅವಳು ಡಿವೋರ್ಸ್‌ ಫೈಲ್‌ ಮಾಡಿದಾಗ ನಾನು ಮುಂಬೈನಲ್ಲಿದ್ದೆ. ಆಗ ಅವಳು ದರ್ಶನ್‌ ಜೊತೆ ಸಂಬಂಧದಲ್ಲಿ ಇದ್ದಾಳೆ ಎಂಬ ವಿಚಾರ ಗೊತ್ತಾಯ್ತು. ನಾವಿಬ್ಬರು ಜೊತೆಗೆ ಇರಲು ಸಾಧ್ಯವಿಲ್ಲ. ನಾನು ಮತ್ತು ದರ್ಶನ್ ಗಂಡ ಹೆಂಡತಿ ಆಗಲು ಇಷ್ಟಪಟ್ಟಿದ್ದೇವೆ ಎಂದು ಹೇಳಿದ್ದಳು. ಅದಕ್ಕೆ ನನ್ನಿಂದ ಏನು ಆಗಬೇಕು ಎಂದು ಕೇಳಿದೆ. ಅದಕ್ಕೆ ಡಿವೋರ್ಸ್‌ ಕೊಡು ಎಂದು ಹೇಳಿದ್ದಳು. ನಾನು ಸರಿ ಎಂದು ಡಿವೋರ್ಸ್‌ ಕೊಟ್ಟೆ. ಬಳಿಕ ಆಕೆ ದರ್ಶನ್‌ ಜೊತೆ ಜೀವನ ಮಾಡಲು ಶುರು ಮಾಡಿದಳು ಎಂದು ಸಂಜಯ್ ಸಿಂಗ್ ಹೇಳಿದ್ದಾರೆ.

Ad
Ad
Nk Channel Final 21 09 2023
Ad