News Karnataka Kannada
Monday, May 06 2024
ಬೆಂಗಳೂರು

ಡಾ.ರಾಜ್‌ ಹುಟ್ಟುಹಬ್ಬದ ಹಿನ್ನೆಲೆ: ಸ್ಮಾರಕಕ್ಕೆ ಕುಟುಂಬಸ್ಥರಿಂದ ಪೂಜೆ

Raj
Photo Credit : NewsKarnataka

ಬೆಂಗಳೂರು: ಅಭಿನಯ ಮತ್ತು ಸರಳತೆಯಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿಕೊಂಡಿರುವ ಕನ್ನಡ ಚಿತ್ರರಂಗದ ಅನಭಿಷಿಕ್ತ ದೊರೆ ವರನಟ ಡಾ. ರಾಜ್‌ಕುಮಾರ್‌ ಅಭಿಮಾನಿಗಳ ಮನದಾಳದಲ್ಲಿ ಇಂದಿಗೂ ಅಮರ. ಇಂದು ವರನಟ ಡಾ.ರಾಜ್‌ಕುಮಾರ್ ಅವರ 95ನೇ ವರ್ಷದ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ರಾಜ್ ಕುಮಾರ್ ಕುಟುಂಬಸ್ಥರು ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಕುಮಾರ್ ಸಮಾಧಿಗೆ ಭೇಟಿ ನೀಡಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದಾರೆ.

ಕಂಠೀರವ ಸ್ಟುಡಿಯೋದಲ್ಲಿರುವ ಡಾ.ರಾಜ್‌ಕುಮಾರ್ ಸ್ಮಾರಕದ ಬಳಿ ರಾಘವೇಂದ್ರ ರಾಜ್‌ಕುಮಾರ್, ಪತ್ನಿ ಮಂಗಳ, ಡಾ.ರಾಜ್ ಪುತ್ರಿ ಲಕ್ಷ್ಮಿ ದಂಪತಿ, ಅಶ್ವಿನಿ ರಾಜ್‌ಕುಮಾರ್ ಪುತ್ರಿ ವಂದಿತಾಡಾ.ರಾಜ್ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದಾರೆ.

ಇದೇ ವೇಳೆ ಹೊನ್ನವಳ್ಳಿ ಕೃಷ್ಣ ಕೂಡ ಭಾಗಿಯಾಗಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ್ದರು.

ಡಾ.ರಾಜ್ ಕುಮಾರ್ ಅವರ 95ನೇ ವರ್ಷದ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿಸಲು ಅಭಿಮಾನಿಗಳು ನಾನಾ ರೀತಿಯ ಸಿದ್ಧತೆಯನ್ನು ಹಮ್ಮಿಕೊಂಡಿದ್ದಾರೆ. ಪ್ರತಿ ವರ್ಷದಂತೆ ಈ ಸಲವೂ ಡಾ.ರಾಜ್ ಪುಣ್ಯಭೂಮಿ ಸ್ಥಳದಲ್ಲಿ ಅಭಿಮಾನಿಗಳು ರಕ್ತದಾನ ಶಿಬಿರ, ಕಣ್ಣುದಾನ ಶಿಬಿರ, ಅನ್ನ ಸಂತರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದ್ದಾರೆ.

ಇನ್ನು ರಾಜಕುಮಾರ್ ಅವರ 95ನೇ ಹುಟ್ಟುಹಬ್ಬದ ನಿಮಿತ್ತ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ಸಂಜೆ 6 ಗಂಟೆಯ ನಂತರ ಮೈ ನೇಮ್ ಇಸ್ ರಾಜ್ (ಭಾಗ 3) ಕಾರ್ಯಕ್ರಮ ನಡೆಯಲಿದೆ. ಸ್ವಾಮಿ ವಿವೇಕಾನಂದ ಟ್ರಸ್ಟ್ ಹಾಗೂ ಟೀಮ್ ಆತ್ರೇಯ ಈ ಸಮಾರಂಭ ಆಯೋಜಿಸಿದೆ. ಈ ಸಲ ರಾಜ್ ಗೀತ ನಮನ ಎಂಬ ಹೆಸರಿನಲ್ಲಿ ಖ್ಯಾತ ಗಾಯಕ ಮನೋಜವಂ ಆತ್ರೇಯ ಅವರ ಸಾರಥ್ಯದಲ್ಲಿ ಹೆಸರಾಂತ ಗಾಯಕರು ಡಾ. ರಾಜ್ ಅವರ ಜನಪ್ರಿಯ ಗೀತೆಗಳನ್ನು ಹಾಡಲಿದ್ದಾರೆ.

ಡಾ. ರಾಜ್‌ಕುಮಾರ್‌ ಮುಂದಿನ ಜನರೇಶನ್‌ಗೂ ಆದರ್ಶ ನಟ. ಇಂದಿಗೂ ಅವರ ಸಿನಿಮಾಗಳನ್ನು ಜನರು ಕುಟುಂಬ ಸಮೇತ ಕುಳಿತು ಮತ್ತೆ ಮತ್ತೆ ನೋಡುತ್ತಾರೆ. ಈ ರೀತಿಯ ಖ್ಯಾತಿ ಇರುವ ಏಕೈಕ ನಟ ಎಂದರೆ ಅದು ರಾಜ್‌ಕುಮಾರ್‌ ಮಾತ್ರ. ವಿಶೇಷವೆಂದರೆ ಅಣ್ಣಾವ್ರು 205 ಸಿನಿಮಾಗಳಲ್ಲಿ ನಾಯಕರಾಗಿ ನಟಿಸಿದ್ದು, ಅವೆಲ್ಲಾ ಸಿನಿಮಾಗಳಿಗೂ ಸೆನ್ಸಾರ್‌ ಮಂಡಳಿ ‘ಯು’ ಪ್ರಮಾಣಪತ್ರವನ್ನೇ ನೀಡಿದೆ.

ಇನ್ನು ಡಾ ರಾಜ್​ಕುಮಾರ್ ಅವರನ್ನು ದಿಗ್ಗಜ ರಾಜಕೀಯ ನಾಯಕರೇ ಹುಡುಕಿ ಬಂದರೂ ಅವರು ರಾಜಕೀಯ ಪ್ರವೇಶ ಮಾಡಲಿಲ್ಲ. ತಮ್ಮ ಜೀವಿತಾವಧಿಯಲ್ಲಿ, ಡಾ. ರಾಜ್​ಕುಮಾರ್ ಅವರು ಅತಿಥಿ ಪಾತ್ರಗಳನ್ನು ಹೊರತುಪಡಿಸಿ 206 ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

“ಗೋಕಾಕ್ ವರದಿ” ಎಂದು ಜನಪ್ರಿಯವಾಗಿರುವ “ಗೋಕಾಕ್ ವರದಿ” ಪ್ರಾಥಮಿಕ ಶಿಕ್ಷಣಕ್ಕೆ ಕನ್ನಡವನ್ನು ಕಡ್ಡಾಯ ಭಾಷೆಯನ್ನಾಗಿ ಮಾಡುವ ಕುರಿತು ಪ್ರಸ್ತಾಪಿಸಿತ್ತು. ಗೋಕಾಕ್ ವರದಿ ಜಾರಿಗಾಗಿ ಡಾ.ರಾಜ್ ಹೋರಾಟ ಅವಿಸ್ಮರಣೀಯ.

ಇಂದಿರಾ ಗಾಂಧಿ ಅವರ ವಿರುದ್ಧ ಕರ್ನಾಟಕದ ಚಿಕ್ಕಮಗಳೂರಿನಲ್ಲಿ ಡಾ.ರಾಜ್​ಕುಮಾರ್ ಅವರನ್ನು ಕಣಕ್ಕಿಳಿಸುವ ಆಲೋಚನೆ ಕರ್ನಾಟಕದ ಹಲವು ರಾಜಕೀಯ ಮುಖಂಡರಿಗಿತ್ತು. ಆದರೆ ಡಾ ರಾಜ್​ ಚುನಾವಣೆಗೆ ಸ್ಪರ್ಧಿಸುವ ಕುರಿತು ಆಸಕ್ತಿ ತೋರಿಸಲಿಲ್ಲ.
ರಾಜಕೀಯಕ್ಕೆ ಇಳಿಯದೇ ಜನರ ಸೇವೆ ಮಾಡುವುದಾಗಿ ಅವರು ತಮ್ಮ ಜೀವನವನ್ನೇ ಉದಾಹರಣೆಯಾಗಿ ತೋರಿಸಿದರು. ಅವರು ರಾಜಕೀಯದಲ್ಲಿ ಮಿಂಚುವ ಎಲ್ಲ ಅವಕಾಶಗಳನ್ನು ಹೊಂದಿದ್ದರೂ ಸಕ್ರಿಯ ರಾಜಕೀಯವನ್ನು ಪ್ರವೇಶಿಸಲಿಲ್ಲ.

ಹಲವು ಶಾಸಕರು ಒಮ್ಮೆ ಒಟ್ಟಿಗೆ ಅಣ್ಣಾವ್ರನ್ನು ಭೇಟಿಯಾಗಿ ರಾಜಕೀಯಕ್ಕೆ ಬರುವಂತೆ ಬೇಡಿಕೆ ಇಟ್ಟರು. ಆದರೆ ಡಾ. ರಾಜ್‌ ಅವರೆಲ್ಲರಿಗೂ ಭೋಜನ ಏರ್ಪಡಿಸಿ ವಾಪಾಸ್‌ ಕಳುಹಿಸಿದ್ದರಂತೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು