News Karnataka Kannada
Sunday, May 05 2024
ಬೆಂಗಳೂರು

ಆರ್​ಸಿಬಿ ಸೋಲಿಗೆ ಅಶ್ವಿನಿ ಕಾರಣವೆಂದ ಡಿ.ಬಾಸ್ ಫ್ಯಾನ್ಸ್; ಆಕ್ರೋಶ ವ್ಯಕ್ತ

Ashw
Photo Credit : NewsKarnataka

ಬೆಂಗಳೂರು : ಅಶ್ವಿನಿ ಪುನೀತ್ ರಾಜ್ ಕುಮಾರ್ ವಿರುದ್ಧ ಅವಹೇಳನಕಾರಿ, ಕೆಟ್ಟದಾದ ಪೋಸ್ಟ್ ಹಾಕಿದ ಕಿಡಿಗೇಡಿ ವಿರುದ್ಧ ಪುನೀತ್ ಅಭಿಮಾನಿಗಳು ರೊಚ್ಚಿಗೆದ್ದು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ನಕಲಿ ಖಾತೆ ಸೃಷ್ಟಿಸಿ ಕಿಡಿಗೇಡಿಯೊಬ್ಬ ಅಶ್ವಿನಿ ಪುನೀತ್ ರಾಜ್ ಕುಮಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದು, ಇದರಿಂದ ರೊಚ್ಚಿಗೆದ್ದ ಅಪ್ಪು ಅಭಿಮಾನಿಗಳು ಇಂದು ಪೊಲೀಸ್ ಕಮೀಷನರ್ ಭೇಟಿಯಾಗಿ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚೆಗಷ್ಟೇ ಐಪಿಎಲ್ ಶುರುವಾಗಿದ್ದು, ಇದಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್ ಇದ್ದ ಹೆಸರನ್ನು ಬದಲಾವಣೆ ಮಾಡಲು, ಆರ್ಸಿಬಿ ಅನ್ಬಾಕ್ಸ್ ಇವೆಂಟ್ ಆಯೋಜನೆ ಮಾಡಿತ್ತು. ಆ ಕಾರ್ಯಕ್ರಮದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಹೆಸರನ್ನು ಬದಲಿಸಲಾಗಿತ್ತು. ಆ ಇವೆಂಟ್ಗೆ ಪುನೀತ್ ರಾಜ್ ಕುಮಾರ್ ಸಹ ಅತಿಥಿಯಾಗಿ ತೆರಳಿದ್ದರು. ಈ ಹಿನ್ನೆಲೆ ನಕಲಿ ಖಾತೆ ಸೃಷ್ಟಿಸಿ ಕಿಡಿಗೇಡಿಯೊಬ್ಬ ಅಶ್ವಿನಿ ಪುನೀತ್ ರಾಜ್ ಕುಮಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದಾನೆ.

@GAJAPADE6 ಹೆಸರಿನ ಟ್ವಿಟರ್ ಖಾತೆಯಿಂದ, ʼಶುಭ ಕಾರ್ಯಕ್ಕೆ ಮುತ್ತೈದೆಯರನ್ನು ಕರೆಯಬೇಕು. ಗಂಡ ಸತ್ತ ಮುಂ.. ಯರನ್ನು ಕರೀಬಾರದು. ಆರ್ಸಿಬಿ ಅನ್ಬಾಕ್ಸ್ ಇವೆಂಟ್ಗೆ ಈ ಮುಂ…ಯನ್ನು ಕರೆದಿದ್ದಕ್ಕೆ ಎಲ್ಲ ಮ್ಯಾಚ್ ಸೋಲ್ತಾ ಇದ್ದಾರೆʼ ಎಂದು #Yuvarajkumar #PuneethRajkumar #Yuva #Dboss #DevilTheHero ಎಂಬ ಹ್ಯಾಷ್ಟ್ಯಾಗ್ ಹಾಕಿ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ನಂತರ ಎಕ್ಸ್ ಖಾತೆಯಲ್ಲಿದ್ದ ಪೋಸ್ಟ್ ಡಿಲೀಟ್ ಮಾಡಲಾಗಿದೆ.

ಅಶ್ವಿನಿ ಪುನೀತ್​ರಾಜ್​ಕುಮಾರ್ ಅವರು ಅನೇಕರಿಗೆ ಮಾದರಿ. ಪುನೀತ್ ನಿಧನದ ನಂತರ ಅವರು ಪಿಆರ್​ಕೆ ಪ್ರೊಡಕ್ಷನ್ಸ್​ನ ಸಂಪೂರ್ಣ ಜವಾಬ್ದಾರಿಯನ್ನು ತಾವೇ ತೆಗೆದುಕೊಂಡಿದ್ದಾರೆ. ಆದರೆ ಇಂತವರ ಬಗ್ಗೆ ಇಷ್ಟು ಕೆಳಮಟ್ಟಕ್ಕೆ ಇಳಿಯಬಾರದು ಎಂದು ಅನೇಕರು ಅಭಿಪ್ರಾಯ ಹೊರಹಾಕಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು