ಮಣಿಪುರ: ಮಣಿಪುರದ ಇಂಫಾಲ್ ಮತ್ತು ನಾಗಾಲ್ಯಾಂಡ್ನ ದಿಮಾಪುರವನ್ನು ಸಂಪರ್ಕಿಸುವ ಸೇತುವೆಯಲ್ಲಿ ಸುಧಾರಿತ ಸ್ಫೋಟಕ ಸಾಧನ(ಐಇಡಿ) ಸ್ಫೋಟಗೊಂಡಿದೆ.
ಮಂಗಳವಾರ ಮಧ್ಯರಾತ್ರಿ 12.45ರ ಸುಮಾರಿಗೆ ಸ್ಫೋಟ ಸಂಭವಿಸಿದೆ.
ಸ್ಫೋಟದ ಪರಿಣಾಮವಾಗಿ ಸೇತುವೆಯ ಮಧ್ಯದಲ್ಲಿ ಮೂರು ಕುಳಿಗಳು, ಎರಡೂ ತುದಿಗಳಲ್ಲಿ ಬಿರುಕುಗಳು ಉಂಟಾಗಿವೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿರುವ ಬಗ್ಗೆ ವರದಿಯಾಗಿಲ್ಲ.
ಸೇತುವೆಯು ರಾಷ್ಟ್ರೀಯ ಹೆದ್ದಾರಿ 2 ರಲ್ಲಿದೆ ಮತ್ತು ಮಣಿಪುರದ ಕುಬ್ರುದಲ್ಲಿದೆ ಲಿಖಾ ಸಪರ್ಮಿನಾ ಗ್ರಾಮಗಳು ಮತ್ತು ಕಾಂಗ್ಪೋಕ್ಪಿ ಜಿಲ್ಲೆಯ ಮೂಲಕ ಹಾದುಹೋಗಲಿದೆ.
ಹೆದ್ದಾರಿಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.