Bengaluru 22°C
Ad

ವಿದ್ಯಾರ್ಥಿನಿಯ ಡೀಪ್‌ ಫೇಕ್‌ ಫೋಟೋ ಲೀಕ್‌ : ಶಾಲೆಯ 2 ಹುಡುಗರು ಡಿಬಾರ್

ಖಾಸಗಿ ಶಾಲೆಯ ವಿದ್ಯಾರ್ಥಿನಿಯ ಪೋಟೋವನ್ನು ಡೀಪ್‌ ಫೇಕ್‌ ಮೂಲಕ ಅರೆನಗ್ನವಾಗಿ ಎಡಿಟ್‌ಮಾಡಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪ್ರಕರಣದಲ್ಲಿ, ಅದೇ ಶಾಲೆಯ 2 ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ.

ಬೆಂಗಳೂರು: ಖಾಸಗಿ ಶಾಲೆಯ ವಿದ್ಯಾರ್ಥಿನಿಯ ಪೋಟೋವನ್ನು ಡೀಪ್‌ ಫೇಕ್‌ ಮೂಲಕ ಅರೆನಗ್ನವಾಗಿ ಎಡಿಟ್‌ಮಾಡಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪ್ರಕರಣದಲ್ಲಿ, ಅದೇ ಶಾಲೆಯ 2 ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಶಾಲಾ ಪ್ರಿನ್ಸಿಪಾಲರು ಅಮಾನತು ಮಾಡಿದ್ದಾರೆ. ಡೀಪ್ ಫೇಕ್ ತಂತ್ರಜ್ಞಾನ ಬಳಸಿ ತಮ್ಮ ಶಾಲೆಯ ವಿದ್ಯಾರ್ಥಿನಿಯೊಬ್ಬರ ಅರೆನಗ್ನ ಫೋಟೋ ಸೃಷ್ಟಿಸಿ ಅದನ್ನು ವಿದ್ಯಾರ್ಥಿಗಳೇ ಇರುವ ಇನ್‌ಸ್ಟಗ್ರಾಂ ಗ್ರೂಪ್‌ ಒಂದರಲ್ಲಿ ಹಂಚಿಕೊಂಡು ವೈರಲ್‌ ಮಾಡಿದ ಆರೋಪದ ಮೇರೆಗೆ ಡಿಬಾರ್‌ ಮಾಡಲಾಗಿದೆ.

ಮೇ 24ರಂದು 9ನೇ ತರಗತಿಯ ವಿದ್ಯಾರ್ಥಿನಿಯರ ಫೋಟೋ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿತ್ತು. ಇದರಿಂದ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಬೆಚ್ಚಿ ಬಿದ್ದಿದ್ದರು. ವಿದ್ಯಾರ್ಥಿನಿಯರು ಶಾಕ್‌ಗೆ ಒಳಗಾಗಿ, ಖಿನ್ನತೆಗೆ ಜಾರುವ ಪರಿಸ್ಥಿತಿ ತಲುಪಿದ್ದರು. ಆತಂಕಿತಗೊಂಡ ವಿದ್ಯಾರ್ಥಿನಿಯ ಪೋಷಕರು ಸೈಬರ್ ಸೆಲ್‌ಗೆ ದೂರು ನೀಡಿದ್ದರು.

ಪ್ರಕರಣವನ್ನು ಶಾಲೆ ಆಡಳಿತ ಮಂಡಳಿ ಹಾಗೂ ಸೈಬರ್‌ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಪ್ರಕರಣದಲ್ಲಿ ಇಬ್ಬರು ವಿದ್ಯಾರ್ಥಿಗಳು ಈ ಕೃತ್ಯವನ್ನು ತಾವೇ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಅರೆನಗ್ನ ಫೋಟೋಗೆ ಹಲವು ಮಂದಿ ವಿಕೃತವಾದ, ಆತಂಕಪಡಿಸುವಂಥ ಕಾಮೆಂಟ್‌ಗಳನ್ನೂ ಹಾಕಿದ್ದಾರೆ. ಇವರನ್ನೂ ಹುಡುಕಿ ತನಿಖೆಗೆ ಒಳಪಡಿಸಲಾಗುತ್ತದೆ ಎಂದು ಸೈಬರ್‌ ಪೊಲೀಸರು ತಿಳಿಸಿದ್ದಾ

Ad
Ad
Nk Channel Final 21 09 2023
Ad