Bengaluru 22°C
Ad

ದರ್ಶನ್ ಪತ್ನಿಯ ಇನ್​ಸ್ಟಾಗ್ರಾಂ ಮತ್ತೆ ಸಕ್ರಿಯ : ಸದ್ಯದಲ್ಲೇ ಮಾಧ್ಯಮದ ಮುಂದೆ

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ ಜೈಲು ಸೇರಿದ ಬಳಿಕ ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ ಇನ್ಸ್ಟಾ ಖಾತೆಯನ್ನು ಡಿಲಿಟ್‌ ಮಾಡಿದ್ದರು. ಈಗ ಮತ್ತೆ ತಮ್ಮ ಇನ್​ಸ್ಟಾಗ್ರಾಂ ಖಾತೆಯನ್ನು ಸಕ್ರಿಯಗೊಳಿಸಿದ್ದಾರೆ. ಮಾತ್ರವಲ್ಲ ವಿಜಯಲಕ್ಷ್ಮಿ ಅವರೇ ದರ್ಶನ್‌ ಪರ ವಕೀಲ ಅನಿಲ್ ಬಾಬು ಅವರನ್ನು ನೇಮಿಸಿದ್ದಾರೆ.

ಬೆಂಗಳೂರು: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ ಜೈಲು ಸೇರಿದ ಬಳಿಕ ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ ಇನ್ಸ್ಟಾ ಖಾತೆಯನ್ನು ಡಿಲಿಟ್‌ ಮಾಡಿದ್ದರು. ಈಗ ಮತ್ತೆ ತಮ್ಮ ಇನ್​ಸ್ಟಾಗ್ರಾಂ ಖಾತೆಯನ್ನು ಸಕ್ರಿಯಗೊಳಿಸಿದ್ದಾರೆ. ಮಾತ್ರವಲ್ಲ ವಿಜಯಲಕ್ಷ್ಮಿ ಅವರೇ ದರ್ಶನ್‌ ಪರ ವಕೀಲ ಅನಿಲ್ ಬಾಬು ಅವರನ್ನು ನೇಮಿಸಿದ್ದಾರೆ.

ಹಳೆ ಖಾತೆಯನ್ನೇ ಮತ್ತೆ ಸಕ್ರಿಯಗೊಳಿಸಿದ್ದಾರೆ. ಆದರೆ ತಾವು ಮಾಡಿದ್ದ ಎಲ್ಲ ಪೋಸ್ಟ್​ಗಳನ್ನು ಡಿಲೀಟ್ ಮಾಡಿದ್ದಾರೆ. ಫಾಲೋ ಮಾಡುತ್ತಿದ್ದವರನ್ನು ಸಹ ಅನ್​ಫಾಲೋ ಮಾಡಿದ್ದಾರೆ.

ವಕೀಲ ಅನಿಲ್ ಬಾಬು ಮಾಧ್ಯಮದವರ ಮುಂದೆ ಮಾತನಾಡಿ ʻʻವಿಜಯಲಕ್ಷ್ಮಿ ಅವರ ಪತ್ನಿಗೆ ಬೇಜಾರು ಆಗಿದ್ದು, ಪವಿತ್ರಾ ಗೌಡ ಅವರು ದರ್ಶನ್‌ ಹೆಂಡತಿ ಎಂದು ಎಲ್ಲ ಮೀಡಿಯಾಗಳು ತೋರಿಸಿದ್ದರು. ದರ್ಶನ್‌ ಅವರಿಗೆ ಇರವ ಏಕೈಕ ಪತ್ನಿ ಎಂದರೆ ಅದು ವಿಜಯಲಕ್ಷ್ಮಿ. ದಂಪತಿಗೆ ವಿನೀಶ್‌ ಎಂಬ ಪುತ್ರನಿದ್ದಾನೆ. ಮಾಧ್ಯಮಗಳು ಪವಿತ್ರಾ ಅವರನ್ನು ದರ್ಶನ್​ರ ಪತ್ನಿ ಎಂದು ಸಂಭೋದಿಸಬಾರದು’ ಎಂದಿದ್ದರು. ವಿಜಯಲಕ್ಷ್ಮಿ ಅವರು ಮಾನಸಿಕವಾಗಿ ಜರ್ಜರಿತವಾಗಿದ್ದಾರೆ. ಸದ್ಯಕ್ಕೆ ಅವರಿಗೆ ಸಮಯದ ಅಗತ್ಯವಿದೆ. ಆದಷ್ಟು ಬೇಗ ಅವರು ಎಲ್ಲರ ಮುಂದೆ ಬರಲಿದ್ದಾರೆ ಎಂದಿದ್ದರು.

Ad
Ad
Nk Channel Final 21 09 2023
Ad