News Karnataka Kannada
Friday, May 10 2024
ಬೆಂಗಳೂರು ನಗರ

ಬಾಡಿಗೆದಾರರೂ ವಿದ್ಯುತ್ ಬಿಲ್ ಕಟ್ಟಬೇಕಿಲ್ಲ: ಇಂಧನ ಸಚಿವರ ಸ್ಪಷ್ಟನೆ

Tenants don't have to pay electricity bill: Power Minister
Photo Credit : Freepik

ಬೆಂಗಳೂರು: ರಾಜ್ಯ ಸರ್ಕಾರ 5 ಗ್ಯಾರೆಂಟಿ ಯೋಜನೆಗಳಲ್ಲಿ ಮೊದಲ ಗ್ಯಾರಂಟಿಯಾಗಿರುವ ಗೃಹಜ್ಯೋತಿ ಯೋಜನೆಯನ್ನು ಸರ್ಕಾರ ಜಾರಿ ಮಾಡಿದೆ. ನಿನ್ನೆ (ಜೂ.2) ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿ ನಡೆಸಿ 5 ಗ್ಯಾರೆಂಟಿ ಯೋಜನೆಗಳನ್ನು ಜಾರಿ ಮಾಡಿದರು.

ಇನ್ನು ಗೃಹಜ್ಯೋತಿ ಯೋಜನೆ ಕುರಿತಾಗಿ ಹಲವು ಅನುಮಾನಗಳಿವೆ. ಜನರಲ್ಲಿ ಹಲವು ಗೊಂದಲ ಮತ್ತು ಪ್ರಶ್ನೆಗಳು ಮೂಡಿವೆ ಈ ಕುರಿತು ಇಂಧನ ಸಚಿವ ಕೆಜೆ ಜಾರ್ಜ ಸ್ಪಷ್ಟನೆ ನೀಡಿದ್ದಾರೆ. ಯಾವ ಬಾಡಿಗೆದಾರರೂ ವಿದ್ಯುತ್ ಬಿಲ್ ಕಟ್ಟಬೇಕಿಲ್ಲ. ನಾವು ಆರ್​​ಆರ್ ಸಂಖ್ಯೆ ಆಧಾರದ ಮೇಲೆ ಯುನಿಟ್​​ ಪರಿಗಣಿಸುತ್ತೇವೆ ಎಂದು ಹೇಳಿದರು.

ಬಾಡಿಗೆದಾರರನ್ನು ಪ್ರತ್ಯೇಕವಾಗಿ ಗುರುತಿಸುವ ಪ್ರಶ್ನೆಯೇ ಬರುವುದಿಲ್ಲ. ಮಾಲೀಕರಿರಲಿ, ಬಾಡಿಗೆದಾರಿರಲಿ ಆರ್ ಆರ್ ಸಂಖ್ಯೆ ಆಧಾರದ ಮೀಟರ್​​ ರೀಡ್​ ಮಾಡಲಾಗುತ್ತದೆ. ಅಲ್ಲಿ 200 ಯುನಿಟ್​​ ಒಳಗಡೆ ಬಳಸಿದ್ದರೇ ಉಚಿತ ನೀಡುತ್ತೇವೆ ಎಂದರು.
ಅಲ್ಲದೇ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಬಳಸಿದರೆ ಹೆಚ್ಚುವರಿ ಬಿಲ್ ಮಾತ್ರ ಕಟ್ಟಬೇಕು. ಅಂದರೆ ವಾರ್ಷಿಕ ಸರಾಸರಿ 10% ಗಿಂತ ಹೆಚ್ವು ಬಳಸಿದರೆ ಮಾತ್ರ ಬಿಲ್ ಕಟ್ಟಬೇಕು.

ಉದಾಹರಣೆಗೆ ವಾರ್ಷಿಕ ಸರಾಸರಿ ಬಳಕೆಯು 100 ಯೂನಿಟ್‌ ಇದೆ ಎಂದಿಟ್ಟುಕೊಳ್ಳೋಣ (ಮಾಸಿಕ ವಿದ್ಯುತ್ ಬಳಕೆಯನ್ನು ಒಟ್ಟು ಲೆಕ್ಕ ಹಾಕಿ 12 ರಿಂದ ಭಾಗಿಸುವ ಮೂಲಕ ಇದನ್ನು ಪಡೆಯಲಾಗಿದೆ). ಒಟ್ಟು ಸರಾಸರಿ ಬಳಕೆಯ ಮೇಲೆ ಹೆಚ್ಚುವರಿ ಶೇ 10 ರಷ್ಟನ್ನು ಒದಗಿಸಲಾಗುತ್ತದೆ. ಇದರೊಂದಿಗೆ, ಶೇ 110 ಯೂನಿಟ್ ವರೆಗೆ ವಿದ್ಯುತ್ ಬಳಸಿದರೆ ಬಿಲ್ ಪಾವತಿಸಬೇಕಿಲ್ಲ ಎಂದು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು