News Karnataka Kannada
Sunday, May 05 2024
ಬೆಂಗಳೂರು ನಗರ

ಬೆಂಗಳೂರು:  ಕಂಟ್ರಿ ಕ್ಲಬ್‌ನಿಂದ ನ್ಯೂ ಇಯರ್ ಬ್ಯಾಷ್ 2023

Bangalore: New Year Bash 2023 by Country Club
Photo Credit : By Author

ಬೆಂಗಳೂರು:  ಬೆಂಗಳೂರಿನ ಕಂಟ್ರಿ ಕ್ಲಬ್ ಆವರಣದಲ್ಲಿ ಡಿಸೆಂಬರ್ 31ರಂದು ನಡೆಯಲಿರುವ ಏಷ್ಯಾದ ಅತಿ ದೊಡ್ಡ ಸಂಭ್ರಮಾಚರಣೆಯ 15ನೇ ಆವೃತ್ತಿಯಾಗಿ, ನ್ಯೂ ಇಯರ್ ಬ್ಯಾಷ್ 2023ರ ಪೋಸ್ಟರ್ ಅನ್ನು ಕಾಲಿವುಡ್ ನಟಿ ತೇಜಸ್ವಿನಿ ಪ್ರಕಾಶ್ ಅವರು ಕಂಟ್ರಿ ಕ್ಲಬ್ ಹಾಸ್ಪಿಟಾಲಿಟಿ ಮತ್ತು ಹಾಲಿಡೇಸ್ ಸಿಎಂಡಿ ಆಗಿರುವ ವೈ. ರಾಜೀವ್ ರೆಡ್ಡಿ ಅವರ ಜೊತೆಗೂಡಿ ಅನಾವರಣಗೊಳಿಸಿದರು.

ಇವೆಂಟ್ ಕುರಿತು ಮಾತನಾಡಿದ ನಟಿ ತೇಜಸ್ವಿನಿ- “ಹೊಸ ವರ್ಷದ ಕೌಂಟ್‌ಡೌನ್ ಅಧಿಕೃತವಾಗಿ ಪ್ರಾರಂಭವಾಗಿದೆ! ಅದನ್ನು ಸ್ವಯಂಪ್ರೇರಿತರಾಗಿ ಆಚರಿಸಲು ಬಯಸುವವರು ಹೊಸ ವರ್ಷದ ಮುನ್ನಾ ದಿನ ಕಂಟ್ರಿ ಕ್ಲಬ್‌ನಲ್ಲಿ ಅದನ್ನು ಸುಲಭವಾಗಿ ಮಾಡಬಹುದು!” ಎಂದು ಹೇಳಿದರು.

ಕಂಟ್ರಿ ಕ್ಲಬ್ ಹಾಸ್ಪಿಟಾಲಿಟಿ ಮತ್ತು ಹಾಲಿಡೇಸ್ (ಸಿಸಿಎಚ್ಎಚ್) ನ ಸಿಎಂಡಿ ಅವರು ಏಷ್ಯಾದ ಅತಿದೊಡ್ಡ ಸಂಭ್ರಮಾಚರಣೆಯ 15ನೇ ಆವೃತ್ತಿಯಾಗಿರುವ ನ್ಯೂ ಇಯರ್ ಬ್ಯಾಷ್ 2023ರ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ – “ಕಂಟ್ರಿ ಕ್ಲಬ್ ವರ್ಷವಿಡೀ ಮನರಂಜನೆಯಿಂದ ತುಂಬಿರುತ್ತದೆ. ಇಷ್ಟು ವರ್ಷಗಳಲ್ಲಿ ಈ ಬ್ರ್ಯಾಂಡ್ ಭಾರತದಾದ್ಯಂತ ಹೇಗೆ ಪ್ರತಿಕ್ರಿಯಿಸಿದೆ ಮತ್ತು ಬೆಳೆದಿದೆ ಎಂಬುದನ್ನು ಗಮನಿಸುವುದೇ ಅದ್ಭುತ ಅನುಭವವಾಗಿದೆ. ಸಂಭ್ರಮಾಚರಣೆಯನ್ನು ಭಾರತದ 8 ನಗರಗಳಲ್ಲಿ ಏಕಕಾಲದಲ್ಲಿ ಆಯೋಜಿಸುತ್ತಿದ್ದು, ಈ ವರ್ಷದ ಆವೃತ್ತಿಯಲ್ಲಿ ಭಾರತೀಯ ಚಲನಚಿತ್ರ ತಾರೆಯರು, ಅಂತಾರಾಷ್ಟ್ರೀಯ ಖ್ಯಾತಿಯ ಡಿಜೆಗಳು, ನೃತ್ಯ ಪ್ರದರ್ಶನಗಳು ಮತ್ತು ಕಾಲಿವುಡ್ ಹಿನ್ನೆಲೆ ಗಾಯಕರು ಪಾಲ್ಗೊಳ್ಳಲಿದ್ದಾರೆ. ಇದು ಆಹ್ಲಾದಕರ ಪಾಕಪದ್ಧತಿಗಳು, ವರ್ಷಾಂತ್ಯದ ಅಪ್ಡೇಟ್‌ಗಳು ಮತ್ತು ಹೊಸ ಸೇವೆಗಳ ಪರಿಚಯವನ್ನೂ ಒಳಗೊಂಡಿರುತ್ತದೆ. ಎಲ್ಲ ಸೌಲಭ್ಯಗಳನ್ನು ಕ್ಲಬ್‌ನ ಸದಸ್ಯರು ಮತ್ತು ಬೆಂಗಳೂರಿನ ನಮ್ಮ ಗ್ರಾಹಕರಿಗಾಗಿ ವಿಶೇಷವಾಗಿ ರಚಿಸಲಾಗಿದೆ. ಬನ್ನಿ, ಆನಂದಿಸಿ!” ಎಂದು ಮನವಿ ಮಾಡಿದರು.

ಕಂಟ್ರಿ ಕ್ಲಬ್ ಬ್ರ್ಯಾಂಡ್ ಭಾರತದ ಚೇತನವನ್ನು ಪ್ರತಿನಿಧಿಸುತ್ತದೆ. ನ್ಯೂ ಇಯರ್ ಬ್ಯಾಷ್ 2023 ಏಷ್ಯಾದ ಅತಿ ದೊಡ್ಡ ಇವೆಂಟ್ ಆಗಿದ್ದು, ಇದರ 15ನೇ ಆವೃತ್ತಿಯಲ್ಲಿ ಅಮೋಘ ಪ್ರದರ್ಶನಗಳು ಸ್ಮರಣೀಯವಾಗಲಿವೆ. ಸದಸ್ಯರಿಗೆ ವಿಶೇಷವಾಗಿ ಮನೋರಂಜನೆ ನೀಡುವಂತಹ ಕಾರ್ಯಕ್ರಮಗಳನ್ನು ಆಯ್ಕೆ ಮಾಡಲಾಗಿದೆ. ಭಾರತದ ಪ್ರಮುಖ ಸೆಲೆಬ್ರಿಟಿಗಳು ಈ ಮುಂಚೆ ಕಂಟ್ರಿ ಕ್ಲಬ್‌ನಲ್ಲಿ ಪ್ರದರ್ಶನ ನೀಡಿದ್ದಾರೆ. ದೇಶಾದ್ಯಂತ ನಡೆಯುವ ಕಂಟ್ರಿ ಕ್ಲಬ್ ಇವೆಂಟ್‌ಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುತ್ತಿದ್ದಾರೆ. ಈ ಮೂಲಕ ನ್ಯೂ ಇಯರ್ ಬ್ಯಾಷ್ 2023, ಏಷ್ಯಾದ ಅತಿ ದೊಡ್ಡ ಸಂಭ್ರಮಾಚರಣೆಯಾಗಲಿದ್ದು, ಹೊಸ ವರ್ಷದ ಮುನ್ನಾದಿನ ಮನರಂಜನೆಯ ಅತಿದೊಡ್ಡ ಶಕ್ತಿ ಕೇಂದ್ರವಾಗಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
31125

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು