ಬೆಂಗಳೂರು: ಸುಳ್ಯದ ಮಹಿಳೆಯೊಬ್ಬಳನ್ನು ಅತ್ಯಾಚಾರ ವೆಸಗಿ ನಂತರ ಹತ್ಯೆಮಾಡಿದ ಸರಣಿ ಕೊಲೆಗಾರ ಸೈನೇಡ್ ಮೋಹನ್ ಗೆ ಕರ್ನಾಟಕ ಹೈಕೋರ್ಟ್ ಮರಣದಂಡನೆಯನ್ನು ಎತ್ತಿ ಹಿಡಿದಿದೆ, ಶಿಕ್ಷೆಯನ್ನು ಖಾಯಂಗೊಳಿಸಿದೆ.
ಅತ್ಯಾಚಾರ ಮತ್ತು ಕೊಲೆಯ ಆರೋಪಕ್ಕೆ ಸಂಬಂಧಪಟ್ಟಂತ್ತೆ ಸೈನೇಡ್ ಮೋಹನ್ ಗೆ 2013 ಡಿಸೆಂಬರ್ 18 ರಂದು ನಾಲ್ಕನೇ ಹೆಚ್ಚುವರಿ ಮತ್ತು ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸೈನೈಡ್ ಮೋಹನ್ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದನು.