ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿರುವ ವೈದ್ಯರ ಮನೆಗಳ ಸಹಿತ ಇತರ ಆಸ್ತಿಪಾಸ್ತಿಗಳಿರುವ ಕಡೆಗೆ ಬುಧವಾರ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಸ್ತ್ರೀರೋಗ ತಜ್ಞೆ ಡಾ. ಕಾಮಿನಿ ರಾವ್ ಅವರ ಮನೆ, ಅವರ ಮಿಲನ್ ಆಸ್ಪತ್ರೆ ಸಹಿತ ಹಲವಾರು ಕಡೆಗಳಿಗೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಕೆಲವೊಂದು ಐಪಿಎಫ್ ಕ್ಲಿನಿಕ್ ಗಳು, ಚಿಕ್ಕಪೇಟೆ, ಕಾಟನ್ ಪೇಟೆಗಳಲ್ಲಿ ಇರುವಂತಹ ಮೆಡಿಸಿನ್ ಡಿಸ್ಟ್ರಿಬ್ಯೂಟರ್ಸ್ ಕಂಪೆನಿಗಳ ಮೇಲೆ ಸುಮಾರು ನೂರಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ಆದಾಯ ತೆರಿಗೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದು, ಹೆಚ್ಚಿನ ಮಾಹಿತಿ ಅಧಿಕಾರಿಗಳು ಹೊರಹಾಕಿಲ್ಲ.