News Karnataka Kannada
Thursday, May 02 2024
ಬೆಂಗಳೂರು ನಗರ

ಮನೆ ಬಾಗಿಲಿಗೆ ಹಣ್ಣು ತಲುಪಿಸುವ ಯೋಜನೆಗೆ ಚಾಲನೆ

Mango
Photo Credit :

ಬೆಂಗಳೂರು: ಮಳೆ ಶುರುವಾಗುತ್ತಿದ್ದಂತೆ ಮಾವಿನ ಸೀಸನ್ ಕೂಡಾ ಆರಂಭವಾಗುತ್ತದೆ. ಅಂಗಡಿಗಳಲ್ಲಿ ಹಣ್ಣಿನ ರಾಜ ಮಾವಿನ ಹಣ್ಣಿನ ವ್ಯಾಪಾರ ಜೋರಾಗಿದೆ. ಈ ನಡುವೆ ರಾಜ್ಯದ ಜನರಿಗೆ ಖುಷಿ ಸುದ್ದಿಯೊಂದಿದೆ. ಮಾವಿನ ಹಣ್ಣನ್ನು ತಿನ್ನಬೇಕು ಅಂದರೆ ಅಂಗಡಿಗೆ ಹೋಗಿ ಖರೀದಿಸಬೇಕು ಅಂತ ಇಲ್ಲ. ನಿಮಗೆ ಬೇಕಾಗುವ ನಾನಾ ತಳಿಯ ಮಾವಿನ ಹಣ್ಣನ್ನು ಆನ್​ಲೈನ್​ನಲ್ಲಿ ಬುಕ್ ಮಾಡಿದರೆ ಸಾಕು ಮನೆ ಬಾಗಿಲಿಗೆ ಬಂದು ತಲುಪುತ್ತದೆ. ಇಂದಿನಿಂದ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (KSMDMCL) ಅಂಚೆ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬುಕ್ ಮಾಡಲು ನಿಗಮದ www.karsirimangoes.karnataka.gov.in ವೆಬ್​ಸೈಟ್​ಗೆ ಹೋಗಬೇಕು. ನಂತರ ತಮಗೆ ಬೇಕಾಗುವ ತಳಿ ಹಣ್ಣನ್ನು ಆರ್ಡರ್ ಮಾಡಬಹುದು. ಹೀಗೆ ಬುಕ್ ಮಾಡಿದ ಹಣ್ಣು ನೇರವಾಗಿ ರೈತರಿಂದ ಗ್ರಾಹಕರ ಕೈಗೆ ಸೇರುತ್ತದೆ. ಕೊರೊನಾ ಕಾರಣದಿಂದ ರೈತರು ಬೆಳೆದ ಮಾವಿನ ಹಣ್ಣಿಗೆ ಬೇಡಿಕೆ ಇರಲಿಲ್ಲ. ಹೀಗಾಗಿ 2020 ರಲ್ಲಿ ರಾಜ್ಯ ಸರ್ಕಾರ ಮತ್ತು ಭಾರತ ಅಂಚೆ ರಾಮನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ರೈತರಿಂದ ಗ್ರಾಹಕರಿಗೆ ಆನ್​ಲೈನ್​ ಮೂಲಕ ತಲುಪಿಸುವ ಸೇವೆಗಳನ್ನ ಆರಂಭಿಸಿತು.

ಕಳೆದ ಬಾರಿ ಯಶಸ್ಸು ಕಂಡ ನಂತರ KSMDMCL ಈ ಬಾರಿಯೂ ಆನ್​ಲೈನ್​ ಶಾಪ್​ನ ಮುಂದುವರಿಸಿದೆ. ದಿ ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿದ KSMDMCLನ ವ್ಯವಸ್ಥಾಪಕ ನಿರ್ದೇಶಕ ಸಿಜಿ ನಾಗರಾಜು, ಕಳೆದ ಎರಡು ವರ್ಷಗಳಲ್ಲಿ ರೈತರು ಮತ್ತು ಗ್ರಾಹಕರಿಗೆ ಹೆಚ್ಚು ಉಪಯುಕ್ತವಾಗಿದೆ. 2020ರಲ್ಲಿ ರಾಜ್ಯಾದ್ಯಂತ 35 ಸಾವಿರ ಗ್ರಾಹಕರಿಗೆ ಒಟ್ಟು 100 ಟನ್ ಮಾವು ಪೂರೈಕೆಯಾಗಿದ್ದು, 2021ರಲ್ಲಿ ಕಡಿಮೆ ಇಳುವರಿ ಬಂದರೂ 45 ಸಾವಿರ ಗ್ರಾಹಕರಿಗೆ 79 ಟನ್ ಮಾವು ಮಾರಾಟವಾಗಿದೆ. ಈ ಮೂಲಕ ಗ್ರಾಹಕರು ಆನ್‌ಲೈನ್‌ನಲ್ಲಿ ರೈತರಿಂದ ಗುಣಮಟ್ಟದ ಮಾವನ್ನು ಖರೀದಿಸಲು ಆಸಕ್ತಿ ಹೊಂದಿದ್ದಾರೆ ಎಂದು ತಿಳಿಸಿದರು.

ಪೋರ್ಟಲ್​ನಲ್ಲಿ ರೈತರ ಹೆಸರು, ಮೊಬೈಲ್ ಸಂಖ್ಯೆಗಳು ಮತ್ತು ಅವರು ಬೆಳೆದ ಹಣ್ಣುಗಳ ತಳಿಗಳ ಬಗ್ಗೆ ಮಾಹಿತಿ ಲಭ್ಯವಿದೆ. ಗ್ರಾಹಕರು ಆರ್ಡರ್ ಮಾಡಿದ ನಂತರ ರೈತರು ಸಂದೇಶವನ್ನು ಸ್ವೀಕರಿಸುತ್ತಾರೆ. ನಂತರ ರೈತರು ಹಣ್ಣುಗಳನ್ನು ಪ್ಯಾಕ್ ಮಾಡಿ ಬೆಂಗಳೂರಿನ ಜನರಲ್ ಪೋಸ್ಟ್ ಆಫೀಸ್ (GPO)ಗೆ ಕಳುಹಿಸುತ್ತಾರೆ. ಬಾಕ್ಸ್‌ಗಳನ್ನು GPO ಯಿಂದ ಆಯಾ ಸ್ಥಳಗಳಿಗೆ ಕಳುಹಿಸಲಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು