News Karnataka Kannada
Thursday, May 02 2024
ಸಾಂಡಲ್ ವುಡ್

ಗೋಣಿಕೊಪ್ಪಲಿನಲ್ಲಿ ಭೀರ್ಯ ಸಿನೆಮಾ ಯಶಸ್ವಿ ಪ್ರದರ್ಶನ

Film
Photo Credit : News Kannada

ಕೊಡವ ಸಿನೆಮಾ ಲೋಕದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಎರಡು ಅತ್ಯಾಧುನಿಕ ಕ್ಯಾಮರಗಳನ್ನು ಬಳಸಿ ಚಿತ್ರೀಕರಿಸಲಾದ ಅದ್ದೂರಿಯ ಸಾಹಸಮಯ ದೃಶ್ಯವನ್ನೊಳಗೊಂಡ ಹಾಗೂ ವಿಭಿನ್ನ ಕಥಾವಸ್ತುವನ್ನು ಎಳೆಯಾಗಿಸಿಕೊಂಡು ಚಿತ್ರಿಕರಿಸಲಾದ ಕೊಡವ ಸಿನೆಮಾ ಭೀರ್ಯ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿ ಗೋಣಿಕೊಪ್ಪಲಿನ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಪ್ರತಿನಿತ್ಯ ಮೂರು ಪ್ರದರ್ಶನ ಕಾಣುತ್ತಿದೆ.

ಸದ್ದಿಲ್ಲದೆ ತನ್ನ ಚಿತ್ರೀಕರಣ ಮುಗಿಸಿ ಎಡಿಟಿಂಗ್, ಡಬ್ಬಿಂಗ್ ಮುಗಿಸಿದ ಚಿತ್ರತಂಡ ಮಾರ್ಚ್ ತಿಂಗಳಲ್ಲಿ ಸಿನೆಮಾದ ಹೆಸರು ಹಾಗೂ ತನ್ನ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಿನಿ ಪ್ರೇಮಿಗಳಿಗೆ ಇಂತಹದೊಂದು ಸಿನೆಮಾ ಸದ್ದಿಲ್ಲದೆ ಚಿತ್ರೀಕರಣ ಮುಗಿಸಿದೆ ಎಂಬ ಶಾಕ್ ನೀಡಿತು. ವಿಭಿನ್ನ ಶೈಲಿಯ ತನ್ನ ಟೈಟಲ್ ಸಾಂಗ್ ಬಿಡುಗಡೆ ಮಾಡುವ ಮೂಲಕ ಬಹಳಷ್ಟು ಸದ್ದು ಮಾಡಿ, ಇದೀಗ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದೇ ಮೊದಲ ಬಾರಿಗೆ ಎಂಬಂತೆ ಕೊಡವ ಭಾಷೆಯನ್ನು ಬಲ್ಲ ಸಿನಿ ಪ್ರೇಕ್ಷಕರು ಮಾತ್ರವಲ್ಲ ಕೊಡವ ಭಾಷೆ ಮಾತನಾಡಲು ಬಾರದ ಪ್ರೇಕ್ಷಕರು ಕೂಡ ಸಿನೆಮಾ ನೋಡಲು ಬರುತ್ತಿದ್ದಾರೆ.

ಸಂಸಾರಿಕ ಕಥಾವಸ್ತುವನ್ನು ಹೊಂದಿರುವ “ಭೀರ್ಯ” ಸಿನೆಮಾದಲ್ಲಿ ಪ್ರೀತಿ, ಪ್ರಣಯ, ನಗು, ಅಳು, ಹೋರಾಟ, ಹಾರಾಟ, ಚೀರಾಟ ಎಲ್ಲಾವು ಅಡಗಿದೆ ಎಂದರೆ ತಪ್ಪಲ್ಲ. ಮಾಡಿರುವ ಖರ್ಚನ್ನು ಎಲ್ಲಿಯೂ ಬಿಟ್ಟುಕೊಡದ ಚಿತ್ರತಂಡ ಕೊಡಗಿಗಾಗಿ ವಿಭಿನ್ನ ಶೈಲಿಯ ಚಿತ್ರವನ್ನು ಮಾಡಿದ್ದೇನೆ ಇದರ ಮುಂದುವರಿದ ಭಾಗ ಕೂಡ ಸದ್ಯದಲ್ಲಿಯೇ ಚಿತ್ರೀಕರಣಗೊಳ್ಳಲಿದೆ, ಎರಡು ಹಂತವಾಗಿ ಸಿನೆಮಾ ಬಿಡುಗಡೆಯಾಗಲಿದೆ ಎನ್ನುತ್ತಾರೆ ಸಿನೆಮಾದ ನಿರ್ಮಾಪಕಿ ತೀತಿರ ಶರ್ಮಿಲಿ ಅಪ್ಪಚ್ಚು. ತೀತಿರ ಸಿನಿ ಕ್ರಿಯೇಷನಡಿಯಲ್ಲಿ ಇದೇ ಮೊದಲ ಬಾರಿಗೆ ನಿರ್ದೇಶನದ ಜವಬ್ದಾರಿ ಹೊತ್ತುಕೊಂಡಿರುವ ಕೊಡಗು ಮೂಲದ ಬೆಂಗಳೂರಿನಲ್ಲಿ ನೆಲೆಸಿರುವ ಯುವಕ ಬಲ್ಯಮಿದೇರೀರ ಆರ್ಯನ್ ಮುದ್ದಪ್ಪ ತನ್ನ ನಿರ್ದೇಶನ ಕೌಶಲ್ಯವನ್ನು ತೋರಿದ್ದು, ಸಾವಿರಾರು ಸಿನೆಮಾಗಳಲ್ಲಿ ಸಾಹಸಮಯ ದೃಶ್ಯಗಳನ್ನು ಮಾಡುವ ಮೂಲಕ ಕನ್ನಡ, ತಮಿಳು, ಹಿಂದಿ ಸಿನಿ ಪ್ರೇಮಿಗಳಿಗೆ ಚಿರಪರಿಚಿತರಾಗಿರುವ ಹಾಗೂ ಕನ್ನಡ ಸಿನೆಮಾ ಕ್ಷೇತ್ರದ ಸಾಹಸ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಅಧ್ಯಕ್ಷರಾಗಿ ದುಡಿದಿರುವ ಕೊಡಗಿನ ಗೋಣಿಕೊಪ್ಪ ಮೂಲದ ಸಾಹಸ ನಿರ್ದೇಶಕ ಫಯಾಜ್ ಖಾನ್ (ಕೆ.ಬಿ.ಕೆ) ಅದ್ದೂರಿಯ ಸಾಹಸಮಯ ದೃಶ್ಯಗಳಿಗೆ ಜೀವತುಂಬಿದ್ದು, ಫೈಟಿಂಗ್ ಯಾವ ಕನ್ನಡ ಸಿನೆಮಾಕ್ಕು ಕಡಿಮೆ ಇಲ್ಲ ಎಂಬಂತಿದೆ.

ಇದೇ ಮೊದಲ ಬಾರಿಗೆ ಎಂಬಂತೆ ಕೊಡವ ಸಿನೆಮಾ ಕ್ಷೇತ್ರದಲ್ಲಿ ರೆಡ್ ಎಪಿಕ್ ಹಾಗೂ ರೆಡ್ ಡ್ರಾಗನ್ ಎಂಬ ಎರಡು ಅತ್ಯಾಧುನಿಕ ಕ್ಯಾಮರಗಳನ್ನು ಏಕಕಾಲದಲ್ಲಿ ಬಳಸಿ ನಾವುಗಳು ಏಕೇ ಕನ್ನಡ ಹಾಗೂ ತಮಿಳು ಸಿನೆಮಾಗಳ ಮಾದರಿ ಸಾಹಸಮಯ ದೃಶ್ಯಗಳನ್ನು ಕೊಡವ ಸಿನೆಮಾಗಳಲ್ಲಿ ಮಾಡಬಾರದು ಎಂದು ಚಿತ್ರತಂಡ ತೋರಿಸಿಕೊಟ್ಟಿದೆ.

ಬಹಳಷ್ಟು ಹಿರಿಯ ಹಾಗೂ ಕಿರಿಯ ಕಲಾವಿದರನೊಳಗೊಂಡ “ಭೀರ್ಯ” ಬದಲಾವಣೆರ ಬೊಳಿ… ಎಂಬ ಶಿರ್ಷಿಕೆಯಡಿಯಲ್ಲಿ ಮೇ 13ರಿಂದ ಗೋಣಿಕೊಪ್ಪಲಿನ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ “ಭೀರ್ಯ” ಚಿತ್ರದ ನಾಯಕನಾಗಿ ಆರ್ಯನ್ ಮುದ್ದಪ್ಪ ಹಾಗೂ ನಾಯಕಿಯಾಗಿ ಅಯ್ಯರಣಿಯಂಡ ಶಿಲಾನ್ ಚೋಂದಮ್ಮ ಇದೇ ಮೊದಲ ಬಾರಿಗೆ ಬಣ್ಣ ಹಚ್ಚಿದ್ದಾರೆ.

ಖಳನಾಯಕನಾಗಿ ಉಡುಪಿ ಮೂಲದ ರಾಜ್ ಚರಣ್ ಹಾಗೂ ಕೊಡಗು ಮೂಲದ ಕಾಳಿಮಾಡ ವಂಶಿಕಾ ಜೋಡಿ ಪ್ರೇಕ್ಷಕರ ಎದೆಯಲ್ಲಿ ಕಿಚ್ಚು ಹಚ್ಚಿದ್ದಾರೆ. ಹಿರಿಯ ಕಲಾವಿದರಾದ ಚಮ್ಮಟೀರ ಪ್ರವೀಣ್ ಉತ್ತಪ್ಪ ಹಾಗೂ ಮಲ್ಲಮಾಡ ಶಾಮಲಾ ಸುನಿಲ್ ಜೋಡಿ ಮುಖ್ಯ ಪಾತ್ರದಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ, ಪ್ರಧಾನ ಭೂಮಿಕೆಯಲ್ಲಿ ಅಜ್ಜಿಕುಟ್ಟಿರ ಪ್ರಥ್ವಿ ಸುಬ್ಬಯ್ಯ, ಅಪಾಡಂಡ ಧನು ದೇವಯ್ಯ, ಕಂಬಾಂಡ ಜಗದೀಶ್, ಮಚ್ಚಮಾಡ ಟಿ ಕಾರ್ಯಪ್ಪ, ಕಾಡ್ಯಮಾಡ ಗೌತಮ್ ಬೋಜಣ್ಣ, ಅಜ್ಜಮಾಡ ಅಭಿಷೇಕ್ ಬಿದ್ದಪ್ಪ (ಎಬಿಎ), ಗುಡಿಯಂಗಡ ಪ್ರಥ್ವಿ ತಿಮ್ಮಯ್ಯ , ಮತ್ರಂಡ ಶ್ಯಾಮ್ ಪೂವಪ್ಪ, ಪೆಮ್ಮಂಡ ರೋಷನ್ ಪೆಮ್ಮಯ್ಯ, ಅಯ್ಯೇಟಿರ ಮಿಥುನ್ ಮೇದಪ್ಪ , ಜಮ್ಮಡ ರಶಿನ್ ಕಾವೇರಪ್ಪ, ಅಲ್ಲುಮಾಡ ಅಭಿಷೇಕ್ ಪೊನ್ನಪ್ಪ, ಬೊಜ್ಜಂಗಡ ಸೋಮಣ್ಣ, ಚೋನಿರ ರಂಜು ಪೊನ್ನಣ್ಣ, ಐಮಣಿಯಂಡ ನವೀನ್, ರಾಜೇಶ್ ಪೊನ್ನಂಪೇಟೆ, ಪ್ರಶಾಂತ್ ಜೋಡುಬೀಟಿ, ಬೊಳಿಯಂಗಡ ಬೋಪಣ್ಣ, ಮುಕ್ಕಾಟೀರ ಸಂದೀಪ್, ಚಂದ್ರು ಕೊಳ್ಳಿ, ಚಂದೂರ ಕ್ಷೇತ್ರ, ಚೀರಂಡ ಚಂಗಪ್ಪ, ಕಾಟಿಮಾಡ ಜಿಮ್ಮಿ ಅಯ್ಯಣ, ಕಾಣತಂಡ ವಿವೇಕ್ ಅಯ್ಯಪ್ಪ, ಚೊಟ್ಟೆಯಂಡಮಾಡ ವಿನು ತಮ್ಮಯ್ಯ, ಚೊಟ್ಟೆಯಂಡಮಾಡ ವಿನಿತಾ ವಿನು, ಕುಪ್ಪಣಮಾಡ ಜಾನ್ಸಿ, ಮಾಳೆಟೀರ ರಶ್ಮಿ ಪ್ರಶಾಂತ್, ಚೆಪ್ಪುಡೀರ ರಾಧಿಕಾ ಪ್ರವೀಣ್, ಪಂದ್ಯಂಡ ಸಬಿತಾ ಹರೀಶ್, ಕಳ್ಳಿಚಂಡ ದೀನಾ ಕೃಷ್ಣ, ಚೋನೀರ ರಮ್ಯ ಪ್ರಶಾದ್, ಚೆಪ್ಪುಡೀರ ಲೆನ್ನನ್ ಮಾದಪ್ಪ, ಅಜ್ಜಮಾಡ ಪ್ರಮೀಳಾ ಕರುಂಬಯ್ಯ, ಪುಟ್ಟಂಗಡ ಧೀಕ್ಷಿತ್ ಅಯ್ಯಪ್ಪ, ಬೂವಕಂಡ ಆಶಿಕ್ ಅಪ್ಪಚ್ಚು, ಪೆಮ್ಮಂಡ ಸಚಿನ್ ಅಪ್ಪಣ್ಣ, ಕೊಕ್ಕೇಂಗಡ ರತನ್ ಅಪ್ಪಣ್ಣ, ಬೊಟ್ಟಂಗಡ ನಟೇಶ್ ಗಣಪತಿ, ಅಜ್ಜಿಕುಟ್ಟಿರ ಸುಬ್ರಮಣಿ ಮಾದಯ್ಯ, ಅಜ್ಜಿಕುಟ್ಟಿರ ಕಸ್ತೂರಿ ಮಾದಯ್ಯ ಪ್ರಶಾಂತ್ ಪೊನ್ನಂಪೇಟೆ, ಸ್ಮೀತಾ ಸೀಗೆತೋಡು, ಗೀತಾ ಸೀಗೆತೋಡು ಮೊದಲಾದವರು ನಟಿಸಿದ್ದಾರೆ. ಚಿತ್ರದಲ್ಲಿ ಅದ್ದೂರಿಯ ಸಾಹಸ ದೃಶ್ಯದೊಂದಿಗೆ ಎರಡು ಹಾಡುಗಳಿದ್ದು ‌ಇದೀಗ ಯೂಟ್ಯೂಬ್’ನಲ್ಲಿ ಬಿಡುಗಡೆಗೊಂಡಿರುವ ಟೈಟಲ್ ಸಾಂಗ್’ನ್ನು ಗುಡಿಯಂಗಡ ಪ್ರಥ್ವಿ ತಿಮ್ಮಯ್ಯ ಬರೆದಿದ್ದು, ಕೊಡಗಿನಲ್ಲಿ ಮೂರು ತಲೆಮಾರಿನ ಗಾಯಕರು ಎಂದು ಹೆಸರಾಗಿರುವ ಖ್ಯಾತ ಗಾಯಕ ಚಕ್ಕೇರ ಪಂಚಮ್ ಬೋಪಣ್ಣ ಮಧುರ ಕಂಠದಲ್ಲಿ ಮೂಡಿ ಬಂದಿದೆ. ಚಮ್ಮಟೀರ ಪ್ರವೀಣ್ ಉತ್ತಪ್ಪ ಬರೆದಿರುವ ಮತ್ತೊಂದು ಹಾಡಿಗೆ ಖ್ಯಾತ ಹಿನ್ನಲೆ ಗಾಯಕ ಹಾಗೂ ಹಲವಾರು ಟಿವಿ ಚಾನೆಲ್’ಗಳ ಶೋಗಳಲ್ಲಿ ವಿಭಿನ್ನ ಶೈಲಿಯ ಹಾಡುಗಳನ್ನು ಹಾಡುವ ಮೂಲಕ ಕನ್ನಡಿಗರ ಮನೆ ಮಾತಾಗಿರುವ ಮಚ್ಚಂಡ ಶರಣ್ ಅಯ್ಯಪ್ಪ ಜೀವ ತುಂಬಿದ್ದಾರೆ.

ಕನ್ನಡದ ಖ್ಯಾತ ಸಂಗೀತ ನಿರ್ದೇಶಕ “ಶ್ರೀ” ಮನಮುಟ್ಟುವ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಕಥೆ ಸಂಭಾಷಣೆಯನ್ನು ಬರೆಯುವ ಮೂಲಕ ಬಲ್ಯಮೀದೇರಿರ ಆರ್ಯನ್ ಮುದ್ದಪ್ಪ ನಿರ್ದೇಶನ ಮಾಡಿದ್ದು, ಸಹ ನಿರ್ದೇಶಕರಾಗಿ ಉಡುಪಿಯ ರಾಜ್ ಚರಣ್, ಸಹಾಯಕ ನಿರ್ದೇಶಕರುಗಳಾಗಿ ಗುಡಿಯಂಗಡ ಪ್ರಥ್ವಿ ತಿಮ್ಮಯ್ಯ, ಮತ್ರಂಡ ಶ್ಯಾಮ್ ಪೂವಪ್ಪ, ಅಜ್ಜಮಾಡ ಅಭಿಷೇಕ್ ಬಿದ್ದಪ್ಪ (ಎಬಿಎ), ಗೌತಮ್ ಮಂಗಳೂರು ಹಾಗೂ ಅಯ್ಯೇಟೀರ ಮಿಥುನ್ ಮೇದಪ್ಪ ಕಾರ್ಯನಿರ್ವಹಿಸಿದ್ದಾರೆ. ಆರ್ಯನ್ ಮುದ್ದಪ್ಪ ಹಾಗೂ ರಾಜ್ ಚರಣ್ ಚಿತ್ರಕಥೆಯನ್ನು ರಚಿಸಿದ್ದು, ಸಿರಿ Y.S.R, ಹಾಗೂ ಗುಡಿಯಂಗಡ ಪ್ರಥ್ವಿ ತಿಮ್ಮಯ್ಯ ಸ್ಕ್ರೀಪ್ಟ್ ಬರೆದಿದ್ದಾರೆ.

ಫ್ರಾನ್ಸಿಸ್ ವಿಮಲ್ ಹಾಗೂ ವಿಜಯ್ ಕೋಟ್ಯಾಧಿಪತಿ ಛಾಯಾಗ್ರಹಣದಲ್ಲಿ ಮೂಡಿಬಂದಿರುವ ಸಿನೆಮಾಕ್ಕೆ ಧನುಷ್. ಎಲ್. ಬೇದ್ರೆ ಸಂಕಲನಕಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಕಲಾ ನಿರ್ದೇಶಕರಾಗಿ ಪೊನ್ನಂಪೇಟೆ ಮೂಲದ ರಾಜೇಶ್ ಅಚ್ಚುಕಟ್ಟಾಗಿ ಜವಬ್ದಾರಿ ನಿರ್ವಹಿಸಿದ್ದು ಸಿನೆಮಾ ಉತ್ತಮವಾಗಿ ಮೂಡಿ ಬಂದಿದೆ. ಮೇ 19ರವರೆಗೆ ಗೋಣಿಕೊಪ್ಪಲಿನ ಸ್ವಾತಂತ್ರ್ಯ ಹೋರಾಟಗಾರರ ಭವನದಲ್ಲಿ ಪ್ರದರ್ಶನವಿದ್ದು, ಮೇ 23ರಿಂದ ಪೊನ್ನಂಪೇಟೆಯಲ್ಲಿ ತೆರೆಕಾಣಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು