ಬೆಂಗಳೂರು: ಪ್ರಥಮ ಹಾಗೂ ದ್ವಿತೀಯ ವರ್ಷದ ಪದವಿ, ಸ್ನಾತಕೋತ್ತರ, ಡಿಪ್ಲೋಮೋ, ಇಂಜಿನಿಯರಿಂಗ್ ತರಗತಿಗಳು ಸಂಕ್ರಾಂತಿ ಬಳಿಕ ಆರಂಭವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ ನಾರಾಯಣ್ ತಿಳಿಸಿದರು.
ಈಗಾಗಲೇ ಅಂತಿಮ ವರ್ಷದ ಸ್ನಾತಕೋತ್ತರ, ಡಿಪ್ಲೋಮೋ, ಪದವಿ ಹಾಗೂ ಇಂಜಿನಿಯರಿಂಗ್ ತರಗತಿಗಳು ಆಫ್ ಲೈನ್ ನಲ್ಲಿ ಈಗಾಗಲೇ ಪ್ರಾರಂಭವಾಗಿದ್ದು, ಪ್ರಾರಂಭ ಮಾಡುವ ಬಗ್ಗೆ ಆಲೋಚನೆಗಳನ್ನು ನಡೆಯುತ್ತಿತ್ತು. ಹಾಗೂ ಸಂಕ್ರಾಂತಿಯ ನಂತರ ಪ್ರಾರಂಭ ಮಾಡುವಂತೆ ಹಲವು ಸಲಹೆಗಳು ಬಂದ ಕಾರಣ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸ್ಪಷ್ಟೀಕರಿಸಿದರು.