ಬೆಂಗಳೂರು: 10ನೇ ಮಹಡಿಯಿಂದ ಜಿಗಿದು ಮಹಿಳಾ ಟೆಕ್ಕಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಮಾರತ್ತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಸೆಸ್ನಾ ಟೆಕ್ ಪಾರ್ಕ್ನಲ್ಲಿ ಗೋವಾ ಮೂಲದ ಗೀತಾಂಜಲಿ (27) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳಾ ಟೆಕ್ಕಿ ಎಂದು ಗುರುತಿಸಲಾಗಿದೆ.
ಗೀತಾಂಜಲಿ ಅಡ್ವಾ ಅಪ್ಟಿಕಲ್ ನೆಟ್ವರ್ಕ್ ಕಂಪನಿಯ ಟೆಕ್ಕಿಯಾಗಿದದ್ದರು. ಈ ಕುರಿತು ಮಾರತ್ತಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.