News Karnataka Kannada
Sunday, May 19 2024
ಬೆಂಗಳೂರು ನಗರ

ತಕ್ಷಣ ಕೈಗೊಂಡ ಕ್ರಮದಿಂದ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ತಪ್ಪಿದ ಅಪಾಯ

Photo Credit :

ತಕ್ಷಣ ಕೈಗೊಂಡ ಕ್ರಮದಿಂದ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ತಪ್ಪಿದ ಅಪಾಯ

ಬೆಂಗಳೂರು : ನಗರದ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಯಿಂದ ಸಂಭವಿಸಲಿದ್ದ ಭಾರೀ ದುರಂತ ಕೊನೆಯ ಕ್ಷಣದಲ್ಲಿ ತಪ್ಪಿದೆ . ಮಲ್ಲೇಶ್ವರಂನಲ್ಲಿರುವ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ರಾತ್ರಿ 11.30 ರ ಹೊತ್ತಿಗೆ ಆಕ್ಸಿಜನ್ ಕೊರತೆ ಎದುರಾಗಿ ಅನೇಕ ರೋಗಿಗಳ ಪ್ರಾಣ ಆಪಾಯದಲ್ಲಿ ಸಿಲುತಿತ್ತು.

 

 ಹೌದು, ಆಸ್ಪತ್ರೆಯಲ್ಲಿ ಆಕ್ಸಿಜನ್ ನಿರ್ವಹಣೆಯ ಹೊಣೆ ಹೊತ್ತಿದ್ದ ವೈದ್ಯ ರೇಣುಕಾ ಪ್ರಸಾದ್ , ತಕ್ಷಣ ಇದನ್ನು ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್ ಅವರ ಗಮನಕ್ಕೆ ತಂದರು . ರಾತ್ರಿ 11 ಗಂಟೆಗೆ ಬಳ್ಳಾರಿಯಿಂದ ಆಗಮಿಸಿಬೇಕಿದ್ದ ಆಕ್ಸಿಜನ್ ಕೆ . ಸಿ.ಜನರಲ್ ಆಸ್ಪತ್ರೆಗೆ ತಲುಪಿರಲಿಲ್ಲ . ಇದರಿಂದ ಆತಂಕ ನಿರ್ಮಾಣವಾಗಿತ್ತು .

 

 ಬಳಿಕ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಮತ್ತು ಸಚಿವರು ನಗರದ ಹೊರವಲಯದಿಂದ ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆ ಮಾಡುವಲ್ಲಿ ಯಶಸ್ವಿಯಾದರು . 200 ರೋಗಿಗಳು ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಮೇಲೆ ಅವಲಂಬಿತರಾಗಿದ್ದಾರೆ . ಅವರ ಪ್ರಾಣ ಆಕ್ಸಿಜನ್ ಪೂರೈಕೆ ಮೇಲೆ ನಿಂತಿದೆ ಎಂದು ವರದಿಗಳು ತಿಳಿಸಿವೆ. 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

205

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು