ಬೆಂಗಳೂರು: ಇಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನ ನಿಲ್ಥಾಣಗಳಿಗೆ ನೀಡುವ ವಿಂಗ್ಸ್ ಇಂಡಿಯಾ 2022 ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಸ್ಮಾರ್ಟ್ ಆವಿಷ್ಕಾರ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಅಳವಡಿಕೆಗೆ ಪ್ರಶಸ್ತಿ ನೀಡಲಾಗಿದೆ. ಏವಿಯೇಷನ್ ಇನ್ನೋವೇಷನ್ ಸಂಸ್ಥೆ ವತಿಯಿಂದ ಕೆಐಎಬಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಹೈದರಾಬಾದ್ನ ತಾಜ್ ಹೋಟೆಲ್ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು ಕೆಐಎಬಿ ಸಿಇಒ ಎಂಡಿ ಹರಿ ಮರರ್ ರಿಂದ ಪ್ರಶಸ್ತಿ ಸ್ವೀಕಾರ ಕಾರ್ಯ ನಡೆದಿದೆ. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ಗೌರವ ಲಭಿಸಿರುವುದು ಸಂತಸದ ವಿಷಯವಾಗಿದೆ.