News Karnataka Kannada
Saturday, May 04 2024
ವಿಜಯಪುರ

ಜನರಿಗೆ ಕಾಂಗ್ರೆಸ್ ಮೋಸದ ಬಗ್ಗೆ ಅರಿವಾಗಿದೆ: ಬಿ.ಶ್ರೀರಾಮುಲು

People Are Aware Of Congress' Fraud: B Sriramulu
Photo Credit : News Kannada

ವಿಜಯಪುರ:  ಜನರಿಗೆ ಕಾಂಗ್ರೆಸ್ ಮೋಸದ ಬಗ್ಗೆ ಅರಿವಾಗಿದೆ ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಡಬಲ್ ಡಿಜಿಟ್ ಕ್ರಾಸ್ ಮಾಡುವುದಿಲ್ಲ.ಆದರೂ ಒಂದಿಬ್ಬರು ಆಯ್ಕೆಯಾಗಬಹುದು ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.

ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ  ನಡೆದ ವಿಜಯಪುರ ಕಾರ್ಯಕರ್ತರ ಜೊತೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು ಜನರಿಗೆ ಕಾಂಗ್ರೆಸ್ ಮೇಲೆ ವಿಶ್ವಾಸ ಸಂಪೂರ್ಣ ಕಡಿಮೆಯಾಗಿದೆ. ಲೋಕಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಧೃಡಸಂಕಲ್ಪ ಮಾಡಬೇಕು. ಇದು ಕೇವಲ ಒಬ್ಬರಿಂದ ಆಗುವ ಕೆಲಸವಲ್ಲ, ಇದೊಂದು ಸಾಮೂಹಿಕ ಪ್ರಯತ್ನ ಎಂದರು.

ಎಲ್ಲ ಕಾರ್ಯಕರ್ತರು ಹೊಸ ಹುಮ್ಮಸ್ಸಿನಿಂದ ದುಡಿಯಬೇಕು. ರಾಜ್ಯದಿಂದ ಹೆಚ್ಚಿನ ಸಂಸದರನ್ನು ಆಯ್ಕೆ ಮಾಡಿ ಕಳುಹಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲಪಡಿಸಬೇಕು ಎಂದು ಕರೆ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು