News Karnataka Kannada
Monday, April 29 2024
ಕ್ರೀಡೆ

ಚಿತ್ರಮಂದಿರಗಳಲ್ಲಿ ವಿಶ್ವಕಪ್‌ ಪಂದ್ಯಾಟ ವೀಕ್ಷಣೆ ಅವಕಾಶ

Opportunity to watch World Cup matches in cinemas
Photo Credit : News Kannada

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐಸಿಸಿ ಕ್ರಿಕೆಟ್ ವಿಶ್ವಕಪ್ ಟೂರ್ನಿ ಜಗತ್ತಿನ ಗಮನಸೆಳೆದಿದೆ. ಫೈನಲ್ ಪಂದ್ಯಕ್ಕೆ ಟಿಕೆಟ್ ಸಿಗದೇ ಕೋಟ್ಯಂತರ ಅಭಿಮಾನಿಗಳು ನಿರಾಶೆ ಅನುಭವಿಸುತ್ತಿರುವ ಬೆನ್ನಲ್ಲೇ ಇತ್ತ ದೇಶದ ದೊಡ್ಡ ದೊಡ್ಡ ಚಿತ್ರಮಂದಿರಗಳು ದೊಡ್ಡ ಪರದೆಯಲ್ಲಿ ಫೈನಲ್ ಪಂದ್ಯ ಕಣ್ತುಂಬಿಕೊಳ್ಳಲು ಅವಕಾಶ ಮಾಡಿಕೊಡುತ್ತಿವೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕ್ರಿಕೆಟ್ ವಿಶ್ವಕಪ್ 2023 ರ ಅಂತಿಮ ಪಂದ್ಯವು ಅಭಿಮಾನಿಗಳನ್ನು ಥಿಯೇಟರ್‌ಗಳಿಗೆ ಕರೆತರುವ ಇತ್ತೀಚಿನ ದೊಡ್ಡ ಪರ್ಯಾಯಾ ಕ್ರಮ ಕೂಡ ಆಗಿದೆ. ಪ್ರಮುಖ ಥಿಯೇಟರ್ ಚೈನ್ ಪಿವಿಆರ್ ಐನಾಕ್ಸ್ ಮತ್ತು ಮಿರಾಜ್ ಸಿನಿಮಾಸ್ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಭಾನುವಾರದ ಅಂತಿಮ ಪಂದ್ಯದ ನೇರ ಪ್ರಸಾರವನ್ನು ಥಿಯೇಟರ್ ನಲ್ಲಿ ಪ್ರದರ್ಶಿಸಲು ಮುಂದಾಗಿವೆ. ಚಿತ್ರಮಂದಿರಗಳ ಈ ಕಾರ್ಯಕ್ಕೆ ಕ್ರಿಕೆಟ್ ಅಭಿಮಾನಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ಲಭಿಸುತ್ತಿದ್ದು, ಬಿಸಿ ದೋಸೆಯಂತೆ ಟಿಕೆಟ್ ಗಳು ಮಾರಾಟವಾಗುತ್ತಿವೆ. PVR INOX ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸಂಜೀವ್ ಕುಮಾರ್ ಬಿಜ್ಲಿ ಈ ಬಗ್ಗೆ ಮಾತನಾಡಿ, ಪಂದ್ಯದ ಪ್ರದರ್ಶನಕ್ಕಾಗಿ ಈಗಾಗಲೇ ಶೇಕಡಾ 45ರಷ್ಟು ಟಿಕೆಟ್‌ಗಳನ್ನು ಮಾರಾಟ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು