ವಿಜಯಪುರ: ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ಐಸಿಸ್ ಬೆಂಬಲಿತ ವ್ಯಕ್ತಿಯೊಂದಿಇಗೆ ಸಿಎಂ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿದ್ದಾರೆಂಬ ಶಾಸಕ ಬಸನಗೌಡ ಪಾಟೀಲ ಯತ್ನಾಳರ ಆರೋಪಕ್ಕೆ ಮೌಲ್ವಿ ತನ್ವೀರ್ ಪೀರಾ ದೇಶಭಕ್ತಿ ಗೀತೆಯ ಮೂಲಕ ಯತ್ನಾಳ್ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ತನ್ನ ಫೇಸ್ಬುಕ್ ಅಕೌಂಟ್ನಲ್ಲಿ “ಸಾರೇ ಜಹಾಸೇ ಅಚ್ಚಾ ಹಿಂದೂ…” ಹಾಡು ಅಪ್ಲೋಡ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ. ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ತಾನೇ ಹಾಡಿದ ಸಾರೇ ಜಹಾಸೇ ಅಚ್ಚಾ ಹಾಡು ಅಪ್ಲೋಡ್ ಮಾಡಿರುವ ಮೌಲ್ವೀ ತನ್ವೀರ್. ದೇಶಭಕ್ತಿ ಗೀತೆ ಹಾಡಿ ತನ್ನ Hafiz Khwaja ಪೇಸ್ಬುಕ್ ಅಕೌಂಟ್ನಲ್ಲಿ ಅಪ್ಲೋಡ್ ಮಾಡಿದ ತನ್ವೀರ್ ಪೀರಾ ಹಾಸ್ಮೀ ಈ ಮೂಲಕ ಶಾಸಕ ಯತ್ನಾಳ್ ಐಸಿಸ್ ನಂಟಿನ ಆರೋಪಕ್ಕೆ ಮೌಲ್ವಿ ಟಾಂಗ್ ಕೊಟ್ಟಿದ್ದಾರೆ.
ಕಳೆದ ಡಿ. 4ರಂದು ಹುಬ್ಬಳ್ಳಿ ತಾ| ಪಾಳೆ ಗ್ರಾಮದ ಹಜರತ್ ಸೈಯ್ಯದ ಮೊಹಮ್ಮದ ಬಾದಶಾ ಪೀರಾ (ಭಾಷಾಪೀರಾ) ದರ್ಗಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ದಕ್ಷಿಣ ಭಾರತ ಮುಸ್ಲಿಂ ಧರ್ಮಗುರುಗಳ ಸಮ್ಮೇಳನದಲ್ಲಿ ಮುಖ್ಯಮಂತ್ರಿಗಳ ಜೊತೆ ಐಸಿಸ್ ಸಂಘಟನೆಯೊಂದಿಗೆ ನಂಟು ಇದ್ದವರು ಭಾಗಿಯಾಗಿದ್ದರು ಎಂದು ಯತ್ನಾಳ ಆರೋಪಿಸಿದ್ದರು. ಆ ಕುರಿತು ದಾಖಲೆ ಬಿಡುಗಡೆ ಮಾಡಿದ್ದರು. ನಂತರ ಈ ವಿವಾದ ಹೊತ್ತಿಕೊಂಡಿದೆ.
https://www.facebook.com/hafiz.khwaja.5