News Karnataka Kannada
Saturday, May 04 2024
ಬೆಂಗಳೂರು

ಜೈನಮುನಿ ಹತ್ಯೆ ಪ್ರಕರಣ: ಸ್ಫೋಟಕ ಮಾಹಿತಿ ತೆರೆದಿಟ್ಟ ಸಿಐಡಿ

Jain muni murder case: CID reveals explosive details
Photo Credit : News Kannada

ಬೆಂಗಳೂರು: ಚಿಕ್ಕೋಡಿಯ ಜೈನಮುನಿ ನಂದಿ ಕಾಮಕುಮಾರ ಸ್ವಾಮೀಜಿ  ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಿಐಡಿಯು 500ಕ್ಕೂ ಹೆಚ್ಚು ಪುಟಗಳ ಚಾರ್ಜ್‍ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದು, ಹಾಗೂ ಜೈನಮುನಿಯ ಕೊಲೆಗೆ ಬೈಗುಳವೇ  ಕಾರಣ ಎಂಬ ಸ್ಫೋಟಕ ಸತ್ಯವನ್ನು ಆರೋಪಿಗಳು ಸಿಐಡಿ ತನಿಖೆಯ ವೇಳೆ ಬಾಯ್ಬಿಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಜುಲೈ 5ರ ರಾತ್ರಿ ಜೈನಮುನಿಯನ್ನು ಹಂತಕರು ಕರೆಂಟ್ ಶಾಕ್ ಕೊಟ್ಟು ತುಂಡರಿಸಿ ಬೋರ್ ವೆಲ್‍ಗೆ ಬಿಸಾಡಿದ್ದರು. ಇದೀಗ ಹಣವಷ್ಟೇ ಅಲ್ಲ.

ಚಾರ್ಜ್‍ಶೀಟ್‍ನಲ್ಲಿ ಏನಿದೆ:  ಆರೋಪಿ ನಾರಾಯಣ ಮಾಳಿಯು ಜೈನಮುನಿ ಬಳಿ 6 ಲಕ್ಷ ಹಣ ಪಡೆದಿದ್ದರು. ಜೈನಮುನಿ ಆರೋಪಿಗಳನ್ನು ಹೀಯಾಳಿಸಿ, ಬೈದ್ದಿದ್ದರು. ಜೈನಮುನಿ ಬೈಗುಳದಿಂದ ಆರೋಪಿ ನಾರಾಯಣ ಕೊಲೆಗೆ ಪ್ಲಾನ್ ಮಾಡಿದ್ದ. ಅಂತೆಯೇ ಇತರ ಆರೋಪಿಗಳ ಜೊತೆ ಸೇರಿ ಕೊಲೆ ಮಾಡಿ ಗುರುತು ಪತ್ತೆಯಾಗದಂತೆ ದೇಹ ಕತ್ತರಿಸಿ, ಬಳಿಕ ಕೊಲೆಗೆ ಬಳಸಿದ್ದ ಮಚ್ಚನ್ನು ಮೇಲ್ಸೇತುವೆ ಮೇಲೆ ಬಿಸಾಡಿದ್ದರು.

ಸದ್ಯ 10 ಮಂದಿಯ ಸಾಕ್ಷ್ಯಾಧಾರ, 164 ಹೇಳಿಕೆಗಳ ಜೊತೆ ಟೆಕ್ನಿಕಲ್ ಎವಿಡೆನ್ಸ್ ಸಂಗ್ರಹಿಸಿ 500ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ಅನ್ನು ಸಿಐಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು