ಹುಬ್ಬಳ್ಳಿ: ರಾಜ್ಯದ ಪ್ರಸಿದ್ಧ ವಾಸ್ತು ತಜ್ಞರಾದ ಚಂದ್ರ ಶೇಖರ ಗುರೂಜಿ ಅವರನ್ನು ನಗರದ ಉಣಕಲ್ ನ ಪ್ರೆಸಿಡೆಂಟ್ ಹೊಟೇಲ್ ನ ರಿಸಪ್ಶನ್ ಬಳಿ ದುಷ್ಕರ್ಮಿಗಳು ಚಾಕೂವಿನಿಂದ ಇರಿದು ಕೊಲೆ ಮಾಡಿದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.
ಮಂಗಳವಾರ ಮಧ್ಯಾಹ್ನ ಹೊಟೆಲ್ ರಿಸೆಪ್ಶನಿಸ್ಟ್ ಬಳಿ ಭಕ್ತರ ಸೋಗಿನಲ್ಲಿ ಬಂದು ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿ ಆಗಿದ್ದಾರೆ.
ಡಿಸಿಪಿ ಸಾಹಿಲ್ ಬಾಗ್ಲಾ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.