News Karnataka Kannada
Friday, May 03 2024
ಮನರಂಜನೆ

“ಕಾಳಿ ಧೂಮಪಾನ” ಪೋಸ್ಟರ್‌ ಹಿಂತೆಗೆದುಕೊಳ್ಳುವಂತೆ ಕೆನಡಾದ ಭಾರತೀಯ ಹೈ ಕಮೀಷನ್‌ ಆಗ್ರಹ

Canadian museum apologises for controversial Kali poster
Photo Credit : Twitter

ಕೆನಡಾ: ಹಿಂದೂ ದೇವತೆ ಕಾಳಿಯನ್ನು ಸಿಗರೇಟು ಸೇದುತ್ತಿರುವಂತೆ ತೋರಿಸಿರುವ ಕಾಳಿ ಚಿತ್ರದ ಪೋಸ್ಟರ್‌ ಕುರಿತು ಭಾರೀ ಪ್ರಮಾಣದ ವಿರೋಧ ವ್ಯಕ್ತವಾಗುತ್ತಿದೆ.

ಈ ಸಂಬಂಧ ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ಅವರ ಚಿತ್ರದ ʼಕಾಳಿ ಧೂಮಪಾನʼದ ಪೋಸ್ಟರ್‌ ಕುರಿತು ಕೆನಡಾದಲ್ಲಿರುವ ಭಾರತೀಯ ಹೈ ಕಮೀಷನ್‌ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು ಕೆನಡಾದ ಅಧಿಕಾರಿಗಳು ಮತ್ತು ಕಾರ್ಯಕ್ರಮದ ಆಯೋಜಕರು “ಇಂತಹ ಎಲ್ಲಾ ಪ್ರಚೋದನಕಾರಿ ವಸ್ತುಗಳನ್ನು ಹಿಂತೆಗೆದುಕೊಳ್ಳುವಂತೆ” ಒತ್ತಾಯಿಸಿದೆ.

ಟೊರಂಟೋದ ಅಗಾಖಾನ್ ಮ್ಯೂಸಿಯಂನಲ್ಲಿನ ಟೆಂಟ್ ಯೋಜನೆಯ ಭಾಗವಾಗಿ ಪ್ರದರ್ಶಿಸಲಾದ ಚಿತ್ರದ ಪೋಸ್ಟರ್‌ನಲ್ಲಿ ಹಿಂದೂ ದೇವರುಗಳನ್ನು ಅಗೌರವದಿಂದ ಚಿತ್ರಿಸಿರುವ ಬಗ್ಗೆ ಕೆನಡಾದ ಹಿಂದೂ ಸಮುದಾಯದ ಮುಖಂಡರಿಂದ ದೂರುಗಳನ್ನು ಸ್ವೀಕರಿಸಿರುವುದಾಗಿ ಹೈಕಮಿಷನ್ ಹೇಳಿಕೆಯಲ್ಲಿ ತಿಳಿಸಿದೆ. ”

ಕೆನಡಾದಲ್ಲಿನ ಹಲವಾರು ಹಿಂದೂ ಗುಂಪುಗಳು ಪೋಸ್ಟರ್‌ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳನ್ನು ಸಂಪರ್ಕಿಸಿವೆ ಎಂದು ತಿಳಿದು ಬಂದಿದೆ. ಕೆನಡಾದ ಅಧಿಕಾರಿಗಳು ಮತ್ತು ಈವೆಂಟ್ ಆಯೋಜಕರು ಇಂತಹ ಎಲ್ಲಾ ಪ್ರಚೋದನಕಾರಿ ವಸ್ತುಗಳನ್ನು ಹಿಂತೆಗೆದುಕೊಳ್ಳುವಂತೆ ನಾವು ಒತ್ತಾಯಿಸುತ್ತೇವೆ.

ಈ ಕುರಿತು ಟೊರೊಂಟೊದಲ್ಲಿರುವ ನಮ್ಮ ಕಾನ್ಸುಲೇಟ್ ಜನರಲ್ ಈ ಕಳವಳಗಳನ್ನು ಕಾರ್ಯಕ್ರಮದ ಸಂಘಟಕರಿಗೆ ತಿಳಿಸಿದ್ದಾರೆ” ಎಂದು ಕೆನಡಾದಲ್ಲಿನ ಭಾರತೀಯ ಹೈ ಕಮೀಷನ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು