ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರ ಶಿವಣ್ಣ ಸಾಥ್ ನೀಡಿದರು. ನಾಗಶೆಟ್ಟಿಕೊಪ್ಪದಿಂದ ರಾಮನಗರ ವರೆಗೂ ಬೃಹತ್ ರೋಡ್ ಶೋ ನಡೆಸಲಾಯಿತು.
ಹುಬ್ಬಳ್ಳಿ ಜನರು ಕರುನಾಡ ಚಕ್ರವರ್ತಿಗೆ ಅಭೂತಪೂರ್ವ ಸ್ವಾಗತ ನೀಡಿದರು. ಪಟಾಕಿ ಸಿಡಿಸಿ, ಹ್ಯಾಟ್ರಿಕ್ ಹೀರೋ ಅಭಿಮಾನಿಗಳು ಸ್ವಾಗತಿಸಿದರು. ಜನರತ್ತ ಕೈಬೀಸಿ ಹಸ್ತಕ್ಕೆ ಮತ ನೀಡುವಂತೆ ಶಿವಣ್ಣ ಮನವಿ ಮಾಡಿದರು. ಜಗದೀಶ್ ಶೆಟ್ಟರ್ ಪರವಾಗಿ ಡಾ ಶಿವರಾಜಕುಮಾರ್ ಭರ್ಜರಿ ಮತಭೇಟೆ ಮಾಡಿದರು.