News Karnataka Kannada
Saturday, April 27 2024
ಹುಬ್ಬಳ್ಳಿ-ಧಾರವಾಡ

89ನೇ ವಯಸ್ಸಿನಲ್ಲಿ ಪಿಹೆಚ್‌ಡಿ ಮುಗಿಸಿ ಡಾಕ್ಟರೇಟ್ ಪದವಿ ಪಡೆದುಕೊಂಡ ಅಜ್ಜ

ಸಾಧನೆಗೆ ವಯಸ್ಸಿನ ಮಿತಿ ಇಲ್ಲ ಎಂಬುದನ್ನು ಧಾರವಾಡದ  ಹಿರಿಯ ಅಜ್ಜರೊಬ್ಬರು ಸಾಬೀತು ಪಡಿಸಿದ್ದಾರೆ. ಜಯನಗರದಲ್ಲಿರುವ ಮಾರ್ಕಂಡೇಯ ದೊಡಮನಿ ಎಂಬವರು ತಮ್ಮ 89ನೇ ವಯಸ್ಸಿನಲ್ಲಿ ಪಿಹೆಚ್‌ಡಿ  ಮುಗಿಸಿ ಇದೀಗ ಡಾಕ್ಟರೇಟ್  ಪದವಿ ಪಡೆದುಕೊಂಡಿದ್ದಾರೆ.
Photo Credit : News Kannada

ಧಾರವಾಡ: ಸಾಧನೆಗೆ ವಯಸ್ಸಿನ ಮಿತಿ ಇಲ್ಲ ಎಂಬುದನ್ನು ಧಾರವಾಡದ  ಹಿರಿಯ ಅಜ್ಜರೊಬ್ಬರು ಸಾಬೀತು ಪಡಿಸಿದ್ದಾರೆ. ಜಯನಗರದಲ್ಲಿರುವ ಮಾರ್ಕಂಡೇಯ ದೊಡಮನಿ ಎಂಬವರು ತಮ್ಮ 89ನೇ ವಯಸ್ಸಿನಲ್ಲಿ ಪಿಹೆಚ್‌ಡಿ  ಮುಗಿಸಿ ಇದೀಗ ಡಾಕ್ಟರೇಟ್  ಪದವಿ ಪಡೆದುಕೊಂಡಿದ್ದಾರೆ.

ರಾಜ್ಯದ ಶೈಕ್ಷಣಿಕ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಈ ಇಳಿ ವಯಸ್ಸಿನ ವೃದ್ಧರೊಬ್ಬರು ಪಿಎಚ್‌ಡಿ ಪದವಿಯನ್ನ ಪಡೆದುಕೊಂಡಿರುವುದು. ಡೋಹರ ಕಕ್ಕಯ್ಯನವರು ಬರೆದ ಕೇವಲ 6 ವಚನಗಳನ್ನು ಮುಂದಿಟ್ಟುಕೊಂಡು 150 ಪುಟಗಳುಳ್ಳ “ಶಿವಶರಹಣ ಡೋಹರ ಕಕ್ಕಯ್ಯ” ಒಂದು ಅಧ್ಯಯನ ಎಂಬ ಮಹಾ ಪ್ರಬಂಧವನ್ನು ಅವರು ಬರೆದಿದ್ದು, ಸತತ 18 ವರ್ಷಗಳಿಂದ ಕಕ್ಕಯ್ಯನವರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಈ ಅವಧಿಯಲ್ಲಿ ಅವರ ಗೈಡ್ ನಿಧನರಾದ ಹಿನ್ನೆಲೆ ಪ್ರಬಂಧ ಸಿದ್ಧಪಡಿಸಲು ವಿಳಂಬವಾಯಿತು. ಆ ನಂತರ ಡಾ.ನಿಂಗಪ್ಪ ಅವರು ಮಾರ್ಗದರ್ಶನ ಮಾಡಿದ್ದಾರೆ. ಕಾದ್ರೊಳ್ಳಿ, ಕಕ್ಕೇರಿ ಸೇರಿದಂತೆ ಇತರ ಕಡೆಗಳಲ್ಲಿ ಸಂಚರಿಸಿ ಕಕ್ಕಯ್ಯನವರ ಬಗ್ಗೆ ಅಧ್ಯಯನ ಮಾಡಿ ಮಹಾಪ್ರಬಂಧವನ್ನು ಅವರು ಸಿದ್ಧಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು