News Karnataka Kannada
Saturday, May 11 2024
ಹುಬ್ಬಳ್ಳಿ-ಧಾರವಾಡ

ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಹೆಣ್ಣುಮಕ್ಕಳ ವಸತಿ ಶಾಲೆ ಕಟ್ಟಡಕ್ಕಾಗಿ ಅರ್ಜಿ ಆಹ್ವಾನ

Morarji Desai Girls' Residential School for Minorities invites applications for building
Photo Credit : News Kannada

ಧಾರವಾಡ: ಧಾರವಾಡ ಗ್ರಾಮೀಣ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಹೆಣ್ಣುಮಕ್ಕಳ ವಸತಿ ಶಾಲೆಗೆ ಹುಬ್ಬಳ್ಳಿ – ಧಾರವಾಡ ಅವಳಿ ನಗರ ವ್ಯಾಪ್ತಿಯಲ್ಲಿ ಬಾಡಿಗೆ ಕಟ್ಟಡದ ಅಗತ್ಯವಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.

ಈಗಾಗಲೇ ವಸತಿ ಶಾಲೆಯಲ್ಲಿ 250 ಹೆಣ್ಣುಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಈ ಶಾಲೆಗೆ ಬಾಡಿಗೆ ಕಟ್ಟಡ ಅವಶ್ಯಕವಿದೆ. ಅವಶ್ಯಕ ಸೌಲಭ್ಯಗಳನ್ನು ಒಳಗೊಂಡಿರುವ ಕಟ್ಟಡವನ್ನು ಬಾಡಿಗೆ ನೀಡಲು ಆಸಕ್ತಿವುಳ್ಳವರು ಜೂನ್ 28 ರೊಳಗಾಗಿ ಸಂಪರ್ಕಿಸಬೇಕು.

ಕಟ್ಟಡ ಒಳ್ಳೆಯ ಗುಣಮಟ್ಟದಾಗಿರಬೇಕು. ಬಣ್ಣ ಮತ್ತು ಸುಣ್ಣ ಹಚ್ಚಿರಬೇಕು. ಪ್ರತ್ಯೇಕ 06 ಕ್ಲಾಸರೂಮ್ ಸುಸಜ್ಜಿತವಾಗಿರಬೇಕು. ಊಟದ ಕೊಠಡಿ ಮತ್ತು ದವಸ ಧಾನ್ಯಗಳು ಸಂಗ್ರಹ ಮಾಡಲು ಪ್ರತ್ಯೇಕ ಕೊಠಡಿಗಳಿರಬೇಕು. ಅಡುಗೆ ಕೋಣೆ, ಆಫೀಸ್ ರೂಮ್, ಸ್ಟಾಫ್‍ರೂಮ್, ಪ್ರತ್ಯೇಕ ಕೊಠಡಿಗಳಿರಬೇಕು. ಶಾಲಾ ಆವರಣವಿರಬೇಕು. ಹೆಣ್ಣುಮಕ್ಕಳ 250 ವಿದ್ಯಾರ್ಥಿಗಳಿಗೆ ಇರಲಿಕ್ಕೆ ಪ್ರತ್ಯೇಕವಾಗಿ ವ್ಯವಸ್ಥೆ ಇರಬೇಕು. 24#7 ಶುದ್ಧ ನೀರಿನ ಪೂರೈಕೆ ಹಾಗೂ ವಿದ್ಯುತ್ ಸರಬರಾಜು ಇರಬೇಕು. 15-20 ಶೌಚಾಲಯ ಮತ್ತು 10-15 ಸ್ನಾನದ ಕೊಠಡಿಗಳು ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿರಬೇಕು. ಸೋಲಾರ್ ವಾಟರ್ ಹೀಟರ್ ನೀರಿನ ವ್ಯವಸ್ಥೆ ಇರಬೇಕು. ಕಟ್ಟಡವು ಕಂಪೌಂಡ್ ಗೋಡೆ ಹೊಂದಿರಬೇಕು.

ಹೆಚ್ಚಿನ ಮಾಹಿತಿಗಾಗಿ ಹಾಗೂ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳ ಕಚೇರಿ, ಮೌಲಾನಾ ಆಝಾದ ಭವನ, ಸಾಧನಕೇರಿ ರಸ್ತೆ, ಸರ್ಕಾರಿ ಮುದ್ರಣಾಲಯ ಹತ್ತಿರ, ಧಾರವಾಡ-580008, ಕಚೇರಿ ದೂರವಾಣಿ ಸಂಖ್ಯೆ-0836-2971590, ಅರಿವು ಕೇಂದ್ರ-0836-2971132 ಕ್ಕೆ ಸಂಪರ್ಕಿಸಬಹುದೆಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು