News Karnataka Kannada
Wednesday, May 08 2024
ಹುಬ್ಬಳ್ಳಿ-ಧಾರವಾಡ

ಧಾರವಾಡ: ಸಚಿವ ಪ್ರಹ್ಲಾದ ಜೋಶಿ ಹೇಳಿಕೆಗೆ ಕಾಂಗ್ರೆಸ್ ಮುಖಂಡರ ತಿರುಗೇಟು

Congress leaders hit back at Minister Prahlad Joshi for his remarks
Photo Credit : News Kannada

ಧಾರವಾಡ: ಕಾಂಗ್ರೆಸ್ ಇಷ್ಟು ವರ್ಷ ಕತ್ತೆ ಕಾಯ್ತಾ ಇತ್ತಾ? ಎಂದು ಹೇಳಿಕೆ ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆಗೆ ಧಾರವಾಡದ ಕಾಂಗ್ರೆಸ್ ಮುಖಂಡರು ತಿರುಗೇಟು ನೀಡಿದ್ದಾರೆ.

ಧಾರವಾಡದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿರುವ ಎಐಸಿಸಿ ಸದಸ್ಯ ದೀಪಕ ಚಿಂಚೋರೆ, ಪಿ.ಎಚ್.ನೀರಲಕೇರಿ, ನಾಗರಾಜ ಗೌರಿ, ಅಲ್ತಾಫ್ ಹಳ್ಳೂರ ಅವರು, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಪ್ರಹ್ಲಾದ ಜೋಶಿ ಅವರ ಉದ್ಧಟತನದ ಹೇಳಿಕೆ. ನಮ್ಮ ಪಕ್ಷದ ಪ್ರಣಾಳಿಕೆ ಬಗ್ಗೆ ಉದ್ಧಟತನದ ಹೇಳಿಕೆ ನೀಡಿದ್ದಾರೆ. ಅವರ ಅಹಂಕಾರ ಮಿತಿಮೀರಿದೆ. ಈ ಅಹಂಕಾರಕ್ಕೆ ಜನ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ. ಜೋಶಿ ಅವರಿಗೆ ಅಧಿಕಾರದಿಂದ ನೆಲ ಕಾಣುತ್ತಿಲ್ಲ. ಅವರು ಮೊದಲು ನೆಲ ನೋಡಿ ಮಾತನಾಡಲಿ, ಯಾವ ಅಧಿಕಾರವೂ ಇಲ್ಲಿ ಶಾಶ್ವತವಲ್ಲ. ಎಂತೆಂತವರದ್ದೋ ಅಹಂಕಾರ ಇಲ್ಲಿ ಮುಗಿದು ಹೋಗಿದೆ. ಜೋಶಿ ಅವರ ರಾಜಕೀಯ ಇತಿಶ್ರೀ ಕೂಡ ಸಮೀಪ ಬಂದಿದೆ. ಅದು ಅವರ ಮಾತಿನಲ್ಲಿ ಕಂಡು ಬರುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು