News Karnataka Kannada
Friday, May 03 2024
ಹುಬ್ಬಳ್ಳಿ-ಧಾರವಾಡ

ಅಧಿಕಾರಿಗಳ ಬೀದಿ ಕಲಹ ಸರಿಯಲ್ಲ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ

Street fighting by officers not right: Union Minister Prahlada Joshi
Photo Credit : News Kannada

ಧಾರವಾಡ: ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಈ ರೀತಿ ರಸ್ತೆಯಲ್ಲಿ ನಿಂತು ಜಗಳ ಮಾಡುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಐಪಿಎಸ್ ಅಧಿಕಾರಿ ಡಿ.ರೂಪಾ ಮಧ್ಯೆ ನಡೆದಿರುವ ಮಾತಿನ ಸಮರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಇದು ಅನಾರೋಗ್ಯಕರ ಬೆಳವಣಿಗೆ. ನಾನು ಸಂಬಂಧಿಸಿದ ಎಲ್ಲ ಅಧಿಕಾರಿಗಳಿಗೆ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಹೇಳುತ್ತೇನೆ. ಅಧಿಕಾರಿಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳಿಗೆ ದೂರುಗಳಿದ್ದರೆ ಸಕ್ಷಮ ಪ್ರಾಧಿಕಾರಕ್ಕೆ ಕಳುಹಿಸಬೇಕು. ಅದನ್ನು ಬಿಟ್ಟು ರಸ್ತೆಯಲ್ಲಿ ನಿಂತು ಮಾಧ್ಯಮಕ್ಕೆ ಪ್ರತಿಕ್ರಿಯೆ ಕೊಡುವುದು ಫೋಟೋ ಹರಿಬಿಡುವುದು ಸರಿಯಲ್ಲ ಎಂದರು

ನಾವು ಕಾಂಗ್ರೆಸ್‌ನವರ ಮೇಲೆ ಆರೋಪ ಮಾಡುತ್ತೇವೆ. ಕಾಂಗ್ರೆಸ್‌ನವರು ನಮ್ಮ ಮೇಲೆ ಆರೋಪ ಮಾಡುವುದು ಸಹಜ. ಇದು ರಾಜಕೀಯ ವ್ಯವಸ್ಥೆ. ಆದರೆ, ಅಧಿಕಾರಿಗಳು ಒಬ್ಬರ ಮೇಲೆ ಒಬ್ಬರು ಕೆಸರೆರಚಾಟ ಮಾಡುವುದು ಸರಿಯಲ್ಲ. ಇಲ್ಲಿ ನಾನು ಯಾವುದೇ ಒಬ್ಬ ಅಧಿಕಾರಿ ಪರ ಮಾತನಾಡುತ್ತಿಲ್ಲ.  ಸೋಶಿಯಲ್ ಮೀಡಿಯಾ ವಾರ್ ಅತ್ಯಂತ ದುರ್ದೈವದ ಸಂಗತಿ. ಆಗಾಗ ರಾಜ್ಯದಲ್ಲಿ ಈ ರೀತಿ ಆಗುತ್ತಿದೆ. ಅಧಿಕಾರಿಗಳು ಈ ರೀತಿ ಮಾಡುವುದು ಸರಿಯಲ್ಲ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು