News Karnataka Kannada
Tuesday, April 30 2024
ಮಂಗಳೂರು

ಬಂಟ್ವಾಳ: ಪುದು ಗ್ರಾಪಂ ಅಧಿಕಾರ ಕಾಂಗ್ರೆಸ್‌ ಬೆಂಬಲಿತರ ಪಾಲಿಗೆ, ಶಾಸಕ ಖಾದರ್‌ ವಿಶ್ವಾಸ

The cooperation of the people of the village is required in electing congress-backed members.
Photo Credit : By Author

ಬಂಟ್ವಾಳ: ಪುದು ಗ್ರಾಮ ಪಂಚಾಯತ್ ಅಧಿಕಾರ ಕಾಂಗ್ರೆಸ್ ಬೆಂಬಲಿತ ಸದಸ್ಯರ ಪಾಲಾಗುತ್ತದೆ ಅದರಲ್ಲಿ ಯಾವುದೇ ಸಂಶಯವಿಲ್ಲ, ಎಲ್ಲಾ ವಾರ್ಡ್ ಗಳಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಆಯ್ಕೆ ಮಾಡುವಲ್ಲಿ ಗ್ರಾಮದ ಜನತೆಯ ಸಹಕಾರ ಬೇಕು ಎಂದು ಉಳ್ಳಾಲ ಶಾಸಕ, ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್ ಹೇಳಿದರು.

ಅವರು ಫೆ. 25 ರಂದು ನಡೆಯುವ ಪುದು ಗ್ರಾಮ ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ನಡೆದ ಚುನಾವಣಾ ಪ್ರಚಾರದ ಸಭೆಯಲ್ಲಿ ಮಾತನಾಡಿದರು.

ಅಧಿಕಾರ ಇದ್ದರೆ ಮಾತ್ರ ಗ್ರಾಮದ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ,ಕಳೆದ ಐದು ವರ್ಷಗಳಲ್ಲಿ ಪುದು ಗ್ರಾಮಪಂಚಾಯತ್ ಜನಪರವಾದ ಉತ್ತಮ ಆಡಳಿತವನ್ನು ನೀಡಿದೆ ಎಂಬ ವಿಶ್ವಾಸವಿದೆ.

ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಹಾಗಾಗಿ ಜನ‌ ಮತ್ತೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ‌ ಮತ ನೀಡುತ್ತಾರೆ ಎಂಬ ವಿಶ್ವಾಸವಿದೆ.

ಮುಂದಿನ ಚುನಾವಣೆಯ ದೃಷ್ಟಿಯಿಂದ ಗ್ರಾಮ ಪಂಚಾಯತ್ ಚುನಾವಣೆಯನ್ನು ಕೇವಲವಾಗಿ ಕಾಣುವ ಪ್ರಶ್ನೆಯಿಲ್ಲ. ಗ್ರಾಮಪಂಚಾಯತ್ ಆಡಳಿತ ಮುಂದಿನ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಅ ನಿಟ್ಟಿನಲ್ಲಿ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಉಮ್ಮರ್ ಫಾರೂಕ್ ಪರಂಗಿಪೇಟೆ, ರಮ್ಲಾನ್ ಮಾರಿಪಳ್ಳ ಚಂದ್ರಹಾಸ ಕರ್ಕೇರ , ಮಮತಾ ಗಟ್ಟಿ , ಪ್ರಶಾಂತ್ ಕಾಜವ, ಹಾಸೀಫ್ ಇಕ್ಬಾಲ್ ದರ್ಬಾರ್, ಜಬ್ಬಾರ್ ಮಾರಿಪಳ್ಕ,,ಇಸ್ಮಾಯಿಲ್ , ಅಬುಬಕ್ಕರ್ ಹತ್ತನೇ ಮೈಲಿಕಲ್ಲು, ಪದ್ಮನಾಭ ನರಿಂಗಾನ, ಶಿವಪ್ಪ ಅಂಚನ್, ಎನ್‌.ಕೆ.ಮಹಮ್ಮದ್, ಇಕ್ಬಾಲ್ ಸುಜೀರ್, ಅಹಮ್ಮದ್ ದಿಲ್, ಲತೀಫ್ ಕುಂಜತ್ಕಲ, ಇಸ್ಮಾಯಿಲ್ ಐ.ಕೆ, ಚಂದಪ್ಪ ಪೂಜಾರಿ, ಹಕೀಂ ಮಾರಿಪಳ್ಳ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು