Bengaluru 22°C
Ad

ದೇಶದಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಲಿದೆ: ಸಚಿವ ಪ್ರಲ್ಹಾದ್​ ಜೋಶಿ

ಎಕ್ಸಿಟ್ ಪೋಲ್ ಸರಾಸರಿ ತೆಗೆದ್ರೂ 350-370 ಸ್ಥಾನ ಬರಲಿದೆ. ದೇಶದಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಲಿದೆ ಎಂದು ಕೇಂದ್ರ ಸಚಿವ, ಧಾರವಾಡ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್​ ಜೋಶಿ ಹೇಳಿದ್ದಾರೆ.

ಬೆಳಗಾವಿ: ಎಕ್ಸಿಟ್ ಪೋಲ್ ಸರಾಸರಿ ತೆಗೆದ್ರೂ 350-370 ಸ್ಥಾನ ಬರಲಿದೆ. ದೇಶದಲ್ಲಿ ಬಿಜೆಪಿ ಪ್ರಚಂಡ ಗೆಲುವು ಸಾಧಿಸಲಿದೆ ಎಂದು ಕೇಂದ್ರ ಸಚಿವ, ಧಾರವಾಡ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್​ ಜೋಶಿ ಹೇಳಿದ್ದಾರೆ.

ನಗದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಕ್ಸಿಟ್ ಪೋಲ್​ಗಿಂತ ಬಿಜೆಪಿಗೆ ಉತ್ತಮ ಫಲಿತಾಂಶ ಬರಲಿದ್ದು, ಅಭಿವೃದ್ಧಿ ಹೊಂದಿದ ಭಾರತ ಮಾಡಲು ಅನುಕೂಲ ಆಗಲಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಸಾಮಾನ್ಯವಾಗಿ ಫ್ಯಾಮಿಲಿ ರನ್ ಪಾರ್ಟಿ. ಪರಿವಾರವಾದ ಪಾರ್ಟಿಯನ್ನು ಜನರು ತಿರಸ್ಕಾರ ಮಾಡಿದ್ದಾರೆ. ಬಿಜೆಪಿ ಕೊಡುಗೆ ಬಗ್ಗೆ ದೇಶದ ಜನ ನೋಡಿದ್ದಾರೆ‌.  60 ವರ್ಷದ ಕಾಂಗ್ರೆಸ್ ಸಾಧನೆಯನ್ನು ಸಹ ಜನರು ನೋಡಿದ್ದಾರೆ. ಆಶ್ವಾಸನೆ ಕೊಟ್ಟು ಬಂದ ಸರ್ಕಾರ 187 ಕೋಟಿ ರೂ. ಭ್ರಷ್ಟಾಚಾರ ಮಾಡಿದೆ.

ತಂದೆಯ ಕಾರಣಕ್ಕೆ ಬಿಜೆಪಿಯಲ್ಲಿ ಯಾರಿಗೂ ಹುದ್ದೆ ಸಿಗಲಿಲ್ಲ. ಬಿಜೆಪಿಯಲ್ಲಿ ಕೆಲಸ ಮಾಡಿದರೆ ಸ್ವತಃ ಬಲದ ಮೇಲೆ ಬರಬಹುದು. ಆದರೆ ಕಾಂಗ್ರೆಸ್, ಸಮಾಜವಾದಿ, ಆರ್​ಜೆಡಿಯಲ್ಲಿ ಹಾಗೆ ಇಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ಚೆಕ್​ನಲ್ಲಿ ಹಣ ತೆಗೆದುಕೊಂಡ್ರು ಇನ್ನೂ ಸಚಿವರ ವಿರುದ್ಧ ಕ್ರಮ ಆಗಿಲ್ಲ. ಇಡೀ ಸರ್ಕಾರವೇ ಹಗರಣದಲ್ಲಿ ಭಾಗಿ ಆಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಕೇಸ್​ ತನಿಖೆಗೆ ಸಿಬಿಐಗೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

Ad
Ad
Nk Channel Final 21 09 2023
Ad