ಬೆಳಗಾವಿ: ನೈಜೀರಿಯಾದಿಂದ ಹಿಂತಿರುಗಿದ 52 ವರ್ಷದ ವ್ಯಕ್ತಿಯೊಬ್ಬರಿಗೆ ಓಮೈಕ್ರಾನ್ ಸೋಂಕು ದೃಢಪಟ್ಟಿದೆ.ಜಿನೋಮ್ ಸೀಕ್ವೆನ್ಸಿಂಗ್ ವರದಿ ವೇಳೆ ಓಮೈಕ್ರಾನ್ ದೃಢವಾಗಿದೆ.
ಆ ವ್ಯಕ್ತಿಯು ನೈಜೀರಿಯಾದಿಂದ ಇಲ್ಲಿಗೆ ಡಿ.13ರಂದು ಬಂದಿದ್ದರು. ಆರ್ಟಿ-ಪಿಸಿಆರ್ ಪರೀಕ್ಷೆ ವೇಳೆ ಅವರಿಗೆ ಕೋವಿಡ್ ಪಾಸಿಟಿವ್ ಬಂದಿತ್ತು.ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 10 ಮಂದಿ ಇದ್ದರು. ಅವರೆಲ್ಲರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.ಸೋಂಕಿತ ವ್ಯಕ್ತಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
‘ನೈಜೀರಿಯಾ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಅವರಿಗೆ ಓಮೈಕ್ರಾನ್ ಬಂದಿರುವ ಬಗ್ಗೆ ಅಧಿಕೃತ ವರದಿ ಕೈಸೇರಿಲ್ಲ’ ಎಂದು ತಿಳಿಸಿದರು.