ಮಿಜೋರಾಂ : ತಡರಾತ್ರಿ ಮಿಜೋರಾಂನ ಚಂಫಾಯ್ ನಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 4.2 ತೀವ್ರತೆ ದಾಖಲಾಗಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ ಮಾಹಿತಿ ನೀಡಿದೆ.
ಮಿಜೋರಾಂನ ಚಂಫಾಯ್ ನ 56 ಕಿ.ಮೀ ಎಸ್ ಇ ನಲ್ಲಿ ರಾತ್ರಿ 1:43ರ ಸುಮಾರಿಗೆ 4.2 ತೀವ್ರತೆಯ ಭೂಕಂಪ ಸಂಭವಿಸಿದೆ. ಚಂಫೈಯಿಂದ ಆಗ್ನೇಯಕ್ಕೆ 56 ಕಿ.ಮೀ ದೂರದಲ್ಲಿ, 60 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ನ್ಯಾಷನಲ್ ಸೆಂಟರ್ ಸೀಸ್ಮಾಲಜಿ ಮಾಹಿತಿ ನೀಡಿದೆ.