ಚಾಮರಾಜನಗರ: ಜಿಲ್ಲೆಯಲ್ಲಿ ಗುರುವಾರ ಒಬ್ಬರಿಗೆ ಕೋವಿಡ್ ಇರುವುದು ದೃಢಪಟ್ಟಿದೆ. ಮೂವರು ಗುಣಮುಖರಾಗಿದ್ದಾರೆ. ಗುರುವಾರ 1,086 ಮಂದಿಯ ಕೋವಿಡ್ ಪರೀಕ್ಷಾ ವರದಿ ಬಂದಿದ್ದು, ಇಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಪೈಕಿ ಒಬ್ಬರು ಕೇರಳದವರು. ಹಾಗಾಗಿ ಈ ಪ್ರಕರಣವನ್ನು ಆ ರಾಜ್ಯಕ್ಕೆ ಸೇರಿಸಲಾಗಿದೆ.ಸಾವಿನ ಪ್ರಕರಣ ವರದಿಯಾಗಿಲ್ಲ.
ಸಕ್ರಿಯ ಪ್ರಕರಣಗಳ ಸಂಖ್ಯೆ 14ಕ್ಕೆ ಇಳಿದಿದೆ. ಸೋಂಕಿತರ ಪೈಕಿ ಐವರು ಹೋಂ ಐಸೊಲೇಷನ್ಲ್ಲಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 32,669 ಪ್ರಕರಣ ದೃಢಪಟ್ಟಿವೆ. 32,015 ಮಂದಿ ಸೋಂಕು ಮುಕ್ತರಾಗಿದ್ದಾರೆ.