ಜಮಖಂಡಿ: ಸಾಮಾಜಿಕ ಜಾಲತಾಣ ದಲ್ಲಿ ತಾಲಿಬಾನ್ ಬೆಂಬಲಿಸುವ ಸಂದೇಶಗಳನ್ನು ಹಂಚಿಕೊಂಡಿದ್ದ ಆರೋಪದ ಮೇಲೆ ಇಲ್ಲಿನ ಆಸಿಫ್ ಗಲಗಲಿಯನ್ನು ಶುಕ್ರವಾರ ರಾತ್ರಿ ಜಮಖಂಡಿ ಪೊಲೀಸರು ಬಂಧಿಸಿದ್ದಾರೆ.
ತನ್ನ ಫೇಸ್ಬುಕ್ ಖಾತೆಯಲ್ಲಿ ‘ಐ ಲವ್ ತಾಲಿಬಾನಿ’ ಎಂದು ಈತ ಪೋಸ್ಟ್ ಮಾಡಿದ್ದ, ಅದು ಇತರ ಜಾಲತಾಣದಲ್ಲಿ ಹರಿದಾಡುತ್ತಿದೆ. ದೇಶದ ಪ್ರಜೆಗಳ ಭಾವನೆಗೆ ಧಕ್ಕೆ ಉಂಟುಮಾಡುವುದು, ಕಾನೂನು ಬಾಹಿರ ಚಟುವಟಿಕೆಗಳ(ನಿಯಂತ್ರಣ) ಕಾಯ್ದೆ, ಮಾಹಿತ ತಂತ್ರಜ್ಞಾನ ಕಾಯ್ದೆಯ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
‘ಆಸಿಫ್ ಗಲಗಲಿಯನ್ನು ಬಂಧಿಸ ಲಾಗಿದೆ. ಪ್ರಕರಣ ಸೈಬರ್ ಕ್ರೈಂಗೆ ಒಪ್ಪಿಸಲಾಗುವುದು. ದೇಶದ್ರೋಹದ ವರ್ತನೆಯ ವಿರುದ್ದ ಕಠಿಣ ಕ್ರಮ ಕೈಕೊಳ್ಳ ಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ತಿಳಿಸಿದ್ದಾರೆ.