Bengaluru 29°C
Ad

ನೋಬಲ್ ಬುಕ್ ಆಫ್ ರೆಕಾರ್ಡ್ಸ್​​​ಗೆ ಸೇರಿದ 4 ತಿಂಗಳ ಮಗು ಸಾಯಿರಾ

ಬಳ್ಳಾರಿ ತಾಲೂಕಿನ ಹಗರಿಗ್ರಾಮದ ನಿವಾಸಿಗಳಾದ ಸುಧಾಕರ ಮತ್ತು ಸಿಂಧು ದಂಪತಿಯ ನಾಲ್ಕು ತಿಂಗಳ ಮಗು ಸಾಯಿರಾ ನೋಬಲ್ ಬುಕ್ ಆಫ್ ರೆಕಾರ್ಡ್ಸ್​​​ಗೆ ಸೇರ್ಪಡೆಯಾಗಿದ್ದಾಳೆ.

ಬಳ್ಳಾರಿ : ಬಳ್ಳಾರಿ ತಾಲೂಕಿನ ಹಗರಿಗ್ರಾಮದ ನಿವಾಸಿಗಳಾದ ಸುಧಾಕರ ಮತ್ತು ಸಿಂಧು ದಂಪತಿಯ ನಾಲ್ಕು ತಿಂಗಳ ಮಗು ಸಾಯಿರಾ ನೋಬಲ್ ಬುಕ್ ಆಫ್ ರೆಕಾರ್ಡ್ಸ್​​​ಗೆ  ಸೇರ್ಪಡೆಯಾಗಿದ್ದಾಳೆ.

ರಾಷ್ಟ್ರ ದ್ವಜಗಳು, ಹಣ್ಣಿನ ಚಿತ್ರ, ಪ್ರಾಣಿಗಳ ಚಿತ್ರ, ಪಕ್ಷಿಗಳು ಇತರೆ ವಸ್ತುಗಳ ಚಿತ್ರವಿರುವ 149 ಫ್ಲಾಶ್ ಕಾರ್ಡ್ಸ್ ಗುರುತಿಸುವ ಮೂಲಕ ಮಗು ಸಾಯಿರಾ ಈ ಸಾಧನೆ ಮಾಡಿದ್ದಾಳೆ. ತಮ್ಮ ಮುದ್ದು ಮಗುವಿನ ಸಾಧನೆಗೆ ಪೋಷಕರು ಹೆಮ್ಮೆ ಪಟ್ಟಿದ್ದಾರೆ.

ಆಂಧ್ರಪ್ರದೇಶ ಅನಂತಪೂರ ಜಿಲ್ಲೆಯ ಜಿಲ್ಲಾಧಿಕಾರಿ ವಿನೋದ ಕುಮಾರ್​ ಅವರು ಮಗು ಸಾಯಿರಾ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ, ನೋಬಲ್ ಬುಕ್ ಆಫ್ ರೆಕಾರ್ಡ್ಸ್ ಸರ್ಟಿಫಿಕೇಟ್​ ನೀಡಿ ಸನ್ಮಾನಿಸಿದರು. ಸಾಯಿರಾ ತಾಯಿ ಸಿಂಧು ಅವರ ತಾಳ್ಮೆಗೆ ಜಿಲ್ಲಾಧಿಕಾರಿ ವಿನೋದ ಕುಮಾರ್ ಹುಬ್ಬೇರಿಸಿದರು. ಸದ್ಯ ಮಗು ಸಾಯಿರಾ ಸಾಧನೆಗೆ ಎಲ್ಲೆಡೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.

Ad
Ad
Nk Channel Final 21 09 2023
Ad