News Karnataka Kannada
Friday, May 03 2024
ಕರ್ನಾಟಕ

ಕ್ರಾಂತಿಕಾರಿ ಎಂದರೆ ಗುಂಡು ಹೊಡೆಯೋದಲ್ಲ ಎಂದ ಮಾಜಿ ಸಿಎಂ ಕುಮಾರ ಸ್ವಾಮಿ

Hd Kumara Swamy 15 7 21
Photo Credit :

ಹುಬ್ಬಳ್ಳಿ: ಕ್ರಾಂತಿಕಾರಿ ಅಂದರೆ ಗುಂಡು ಹೊಡೆಯುವುದು ಅಲ್ಲ ಎಂದು ಹೇಳುವ ಮೂಲಕ ನಟ ಚೇತನ್ ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ಕುಮಾರಸ್ವಾಮಿಗೆ ಕಾಂತ್ರಿಕಾರಿ ದೃಷ್ಟಿಯಿಲ್ಲ ಅನ್ನೋ ಚೇತನ್ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಕ್ರಾಂತಿಕಾರಿ ಅಂದ್ರೆ ನೀರಾವರಿ. ಶಿಕ್ಷಣ, ಆರೋಗ್ಯ ಹಾಗೂ ಸಾಲ ಇಲ್ಲದಂತೆ ರೈತರು ಬದುಕು ನಡೆಸುವ ಬಗ್ಗೆ ಕ್ರಾಂತಿಕಾರಿ ಎಂದು ಹೇಳಿದ್ದೆ. ಅವರು ನಟರಾದರೆ ನಾನು ಸಿನಿಮಾ ನಿರ್ದೇಶನ ಮಾಡಿದ್ದೇನೆ. ಆ ಕುರಿತು ಹೆಚ್ಚು ಚರ್ಚೆ ಬೇಡ ಎಂದು ಹೇಳಿದರು.
ಕರ್ನಾಟಕವನ್ನು 5 ವರ್ಷಗಳ ಮುನ್ನಡೆಸುವ ಸ್ವಾತಂತ್ರ್ಯವಿದ್ದಿದ್ದರೆ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತೇನೆಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಮೊದಲಿಗೆ 2 ಬಾರಿ ಅವರು ಸಿಎಂ ಆಗಿದ್ದಾಗಲೂ ಕೂಡ ನಮ್ಮ ರಾಜ್ಯಕ್ಕೆ ಅಂತಹದೇನೂ ಕ್ರಾಂತಿಕಾರಿ ಮಾಡಲಿಲ್ಲ, ಪ್ರಯತ್ನವನ್ನು ಮಾಡಲಿಲ್ಲ. ಮುಖ್ಯವಾಗಿ ಅವರಿಗೆ ಕ್ರಾಂತಿಕಾರಿ ದೃಷ್ಟಿ ಇಲ್ಲ ಮತ್ತು ಯಥಾಸ್ಥಿತಿ ಚಿಂತನೆ ಪ್ರಕ್ರಿಯೆಯು ಅಧಿಕಾರಕ್ಕೆ ಮುಂಚಿತವಾಗಿರಬೇಕು ಇವುಗಳೆಲ್ಲಾ ನಾನ್ ಸೆನ್ಸ್ ಪದಗಳು ಎಂದು ಚೇತನ್ ಟ್ವೀಟ್ ಮಾಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
145

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು