News Karnataka Kannada
Friday, May 10 2024
ಕರ್ನಾಟಕ

ಕೇರಳ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ಕಾಸರಗೋಡಿಗೆ 97.71%ಫಲಿತಾಂಶ

Photo Credit :

ಕೇರಳ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ಕಾಸರಗೋಡಿಗೆ 97.71%ಫಲಿತಾಂಶ

ಕಾಸರಗೋಡು : ಕೇರಳ ಎಸ್.ಎಸ್.ಎಲ್.ಸಿ. ಪರೀ ಕ್ಷಾ ಸೋಮವಾರ ಸಂಜೆ ಫಲಿತಾಂಶ ಪ್ರಕಟಗೊಂಡಿದ್ದು, ಜಿಲ್ಲೆಯಲ್ಲಿ ಶೇ 97.71 ಫಲಿತಾಂಶ ಲಭಿಸಿದೆ.

ಜಿಲ್ಲೆಯ 161 ಶಾಲೆಗಳಿಂದ 18,975 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 18,541 ಮಂದಿ ತೇರ್ಗಡೆಗೊಂಡು,ಮುಂದಿನ ಶಿಕ್ಷಣಕ್ಕೆ ಅರ್ಹರಾಗಿದ್ದಾರೆ. 90 ಶಾಲೆಗಳಲ್ಲಿ ಶೇ 100 ಫಲಿತಾಂಶ ಬಂದಿದೆ. 1461 ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ “ಎ”ಶ್ರೇಣಿ ಪಡೆದಿದ್ದಾರೆ. ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ ನಾಯಮ್ಮರಮೂಲೆ ತನ್ ಬೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆ ಮತ್ತು ಕಾಞಂಗಾಡ್ ಶೈಕ್ಷಣಿಕ ಜಿಲ್ಲೆಯಲ್ಲಿ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಒಟ್ಟು 161 ಶಾಲೆಗಳಲ್ಲಿ 96 ಸರಕಾರಿ ಶಾಲೆಗಳು, 35 ಅನುದಾನಿತ ಶಾಲೆಗಳು, 30 ಅನುದಾನ ರಹಿತ ಶಾಲೆಗಳು ಇವೆ. ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ 10,608 ಮಂದಿ, ಕಾಞಂಗಾಡ್ ಶೈಕ್ಷಣಿಕ ಜಿಲ್ಲೆಯಲ್ಲಿ 8,367 ಮಂದಿ ಪರೀಕ್ಷೆ.

ಬರೆದಿದ್ದಾರೆ. ಕಾಸರಗೋಡಿನಲ್ಲಿ 10.238 ಮಂದಿ, ಕಾಞಂಗಾಡಿನಲ್ಲಿ 8,303 ಮಂದಿ ತೇರ್ಗಡೆಹೊಂದಿದ್ದಾರೆ. ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ 84 ಶಾಲೆಗಳಲ್ಲಿ, ಕಾಞಂಗಾಡ್ ಶೈಕ್ಷಣಿಕಜಿಲ್ಲೆಯಲ್ಲಿ 77 ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ.ಪರೀಕ್ಷೆಗಳು ನಡೆದಿವೆ.

ಅತ್ಯಧಿಕ ಪ್ರಮಾಣದಲ್ಲಿ “ಎ”ಶ್ರೇಣಿ ಸರಕಾರಿ ಶಾಲೆ ಕುಟ್ಟಮತ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಾಗಿದೆ. ಇಲ್ಲಿ 60 ಮಂದಿ ವಿದ್ಯಾರ್ಥಿಗಳು ಈ ಸಾಲಿನಲ್ಲಿದ್ದಾರೆ. ಅನುದಾನಿತ ವಿಭಾಗದಲ್ಲಿ ಚಟ್ಟಂಚಾಲ್ ಹೈಯರ್ ಸೆಕೆಂಡರಿ ಶಾಲೆಯಿದೆ. ಇಲ್ಲಿ 116 ವಿದ್ಯಾರ್ಥಿಗಳು ಈ ವಿಜಯ ಸಾಧಿಸಿದ್ದಾರೆ. ಉದಿನೂರು ಸರಕಾರಿ ಹೈಯರ್ ಸೆಕಂಡರಿ ಸಾಲೆ ಮತ್ತು ಚಾಯೋತ್ ಸರಕಾರಿ ಹೈಯರ್ ಸೆಕೆಂಡರಿ ಸಾಲೆಯಲ್ಲಿ ತಲಾ 55 ಮಂದಿ ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲೂ “ಎ”ಶ್ರೇಣಿ ಪಡೆದಿದ್ದಾರೆ. ಕಾಸರಗೋಡು ಶೈಕ್ಷಣಿಕ ಜಿಲ್ಲೆಯಲ್ಲಿ 535 ವಿದ್ಯಾರ್ಥಿಗಳು, ಕಾಞಂಗಾಡ್ ಶೈಕ್ಷಣಿಕಜಿಲ್ಲೆಯಲ್ಲಿ 926 ವಿದ್ಯಾರ್ಥಿಗಳು ಎಲ್ಲ ವಿಷಯಗಳಲ್ಲಿ “ಎ”ಶ್ರೇಣಿ ಪಡೆದಿದ್ದಾರೆ. ಕಾಸರಗೋಡಿನಲ್ಲಿ 36, ಕಾಞಂಗಾಡಿನಲ್ಲಿ 54 ವಿದ್ಯಾಲಯಗಳು ಶೇ 100 ಫಲಿತಾಂಶ ಪಡೆದಿವೆ.

ಕಾಸರಗೋಡು : ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯ ಜಿಲ್ಲೆಯ 6 ಪ್ರೀಮೆಟ್ರಿಕ್ ಹಾಸ್ಟೆಲ್ ಗಳು ಎಸ್.ಎಸ್.ಎಲ್.ಸಿಯಲ್ಲಿ ಶೇ 100 ಫಲಿತಾಂಶ ಪಡೆದಿವೆ. ಇಲ್ಲಿ ವಸತಿ ಹೂಡಿದ ಎಲ್ಲ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ತೇರ್ಗಡೆಹೊಂದಿದ್ದಾರೆ.

ಕಾಸರಗೋಡು ಬ್ಲೋಕ್ ವ್ಯಾಪ್ತಿಯ ಬದಿಯಡ್ಕ ಹಾಸ್ಟೆಲ್ ನ 4 ವಿದ್ಯಾರ್ಥಿಗಳು, ಕಾಸರಗೋಡು ನಗರಸಭೆ ವ್ಯಾಪ್ತಿಯ ಹುಡುಗರ ಹಾಸ್ಟೆಲ್ನ 18 ವಿದ್ಯಾರ್ಥಿಗಳು, ಕಾರಡ್ಕ ಬ್ಲೋಕ್ ವ್ಯಾಪ್ತಿಯ ಕಾರಡ್ಕ ಹಾಸ್ಟೆಲ್ ನ 7 ವಿದ್ಯಾರ್ಥಿಗಳು, ಕಾಞಂಗಾಡ್ ನಗರಸಭೆಯ ಹುಡುಗಿಯರ ಹಾಸ್ಟೆಲ್ ನ ಮತ್ತು ಕಾಞಂಗಾಡ್ ಬ್ಲೋಕ್ನ ಬಂಗಳಂ ಹಾಸ್ಟೆಲ್ ನ 8 ವಿದ್ಯಾರ್ಥಿಗಳು, ಪರಪ್ಪ ಬ್ಲೋಕ್ ನ ರಾಜಪುರಂ ಹಾಸ್ಟೆಲ್ ನ 4 ವಿದ್ಯಾರ್ಥಿಗಳು ತೇರ್ಗಡೆಹೊಂದಿದ್ದು, ಉನ್ನತ ಶಿಕ್ಷಣಕ್ಕೆ ಅರ್ಹರಾಗಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
176
Stephen K

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು