Bengaluru 23°C
Ad

ಡೆಂಗ್ಯೂ ಭೀತಿ ಬೆನ್ನಲ್ಲೇ ಮತ್ತೊಂದು ಆತಂಕ, ಪುಣೆಯಲ್ಲಿ ಝಿಕಾ ವೈರಸ್ ಪತ್ತೆ!

ದೇಶದೆಲ್ಲೆಡೆ ಇದೀಗ ಮಳೆಗಾಲ ಆರಂಭವಾಗಿದ್ದು, ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಬೆಂಬಿಡದೆ ಸುರಿಯುತ್ತಿದೆ. ಈ ಅಕಾಲಿಕಾ ಮಳೆಯಿಂದಾಗಿ ಅಲ್ಲಲ್ಲೆ ಮಳೆ ನಿಂತು ಡೆಂಗ್ಯೂ ಸೊಳ್ಳೆ ಉತ್ಪತ್ತಿಗೊಂಡು ಜನರಲ್ಲಿ ಡೆಂಗ್ಯೂ ಕಾಯಿಲೆಯನ್ನು ಉಂಟುಮಾಡಿದೆ.

ಪುಣೆ:  ದೇಶದೆಲ್ಲೆಡೆ ಇದೀಗ ಮಳೆಗಾಲ ಆರಂಭವಾಗಿದ್ದು, ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಬೆಂಬಿಡದೆ ಸುರಿಯುತ್ತಿದೆ. ಈ ಅಕಾಲಿಕಾ ಮಳೆಯಿಂದಾಗಿ ಅಲ್ಲಲ್ಲೆ ಮಳೆ ನಿಂತು ಡೆಂಗ್ಯೂ ಸೊಳ್ಳೆ ಉತ್ಪತ್ತಿಗೊಂಡು ಜನರಲ್ಲಿ ಡೆಂಗ್ಯೂ ಕಾಯಿಲೆಯನ್ನು ಉಂಟುಮಾಡಿದೆ. ಸದ್ಯ ರಾಜ್ಯದಾದ್ಯಂತ ಡೆಂಗ್ಯೂ ಕೇಸ್‌ಗಳು ಹೆಚ್ಚುತ್ತಲೇ ಇದೆ.

ಈ ನಡುವೆ, ಪುಣೆಯಲ್ಲಿ ಮತ್ತೊಂದು ವೈರಸ್​ ಪತ್ತೆಯಾಗಿದ್ದು, ಇದನ್ನು ಝಿಕಾ ವೈರಸ್ ​ ಎಂದು ಗುರುತಿಸಲಾಗಿದೆ. ಈ ವೈರಸ್​ ಸದ್ಯ ಪುಣೆಯಲ್ಲಿ 46 ವರ್ಷದ ವೈದ್ಯರು ಮತ್ತು 13 ವರ್ಷದ ಮಗಳಲ್ಲಿ ಪತ್ತೆಯಾಗಿದೆ ಎಂದು ವರದಿಗಳು ಹೇಳಿವೆ.

ಪುಣೆಯಲ್ಲಿ ಮೊದಲ ಬಾರಿಗೆ ಝಿಕಾ ವೈರಸ್​ ಪತ್ತೆಯಾಗಿದೆ. ಇಲ್ಲಿನ 46 ವರ್ಷದ ವೈದ್ಯರು ಮತ್ತು ಅವರ 13 ವರ್ಷದ ಮಗಳಿಗೆ ಝಿಕಾ ರೋಗಲಕ್ಷಣಗಳು ಇರುವುದು ಪತ್ತೆಯಾಗಿದ್ದು, ಪತ್ತೆಯಾಗಿದ್ದು, ಸದ್ಯ ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Ad
Ad
Nk Channel Final 21 09 2023
Ad