Bengaluru 22°C
Ad

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸೋನಾಕ್ಷಿ ಸಿನ್ಹಾ ಗೆಳಯ ಜಹೀರ್‌ ಇಕ್ಬಾಲ್

ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಅವರು ತಮ್ಮ ದೀರ್ಘಕಾಲದ ಗೆಳೆಯ ಜಹೀರ್‌ ಇಕ್ಬಾಲ್‌ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಮುಂಬೈ: ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಅವರು ತಮ್ಮ ದೀರ್ಘಕಾಲದ ಗೆಳೆಯ ಜಹೀರ್‌ ಇಕ್ಬಾಲ್‌ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಎರಡೂ ಕುಟುಂಬಗಳ ಆಪ್ತರು, ಗೆಳೆಯರ ಸಮ್ಮುಖದಲ್ಲಿ ಸೋನಾಕ್ಷಿ ಸಿನ್ಹಾ ಹಾಗೂ ಜಹೀರ್‌ ಇಕ್ಬಾಲ್‌ ಅವರು ಮದುವೆಯಾಗಿದ್ದು, ಮದುವೆಯ ಫೋಟೊಗಳನ್ನು ಸೋನಾಕ್ಷಿ ಸಿನ್ಹಾ ಅವರೇ ಹಂಚಿಕೊಂಡಿದ್ದಾರೆ. ಸೋನಾಕ್ಷಿ ಸಿನ್ಹಾ ಮದುವೆಯ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ.

ಸೋನಾಕ್ಷಿ ಸಿನ್ಹಾ ಅವರು ಫೋಟೊಗಳನ್ನು ಹಂಚಿಕೊಂಡಿರುವ ಜತೆಗೆ ಭಾವನಾತ್ಮಕವಾಗಿ ಪೋಸ್ಟ್‌ ಮಾಡಿದ್ದಾರೆ. “ಏಳು ವರ್ಷದ ಹಿಂದಿನ ಇದೇ ದಿನ ಅಂದರೆ, 2017ರ ಜೂನ್‌ 23ರಂದು ನಮ್ಮಿಬ್ಬರ ಕಣ್ಣುಗಳು ಮೊದಲ ಬಾರಿ ಸಂಧಿಸಿದವು. ಆ ಕಣ್ಣುಗಳ ನೋಟದಲ್ಲಿಯೇ ನಾವು ನಿಜವಾದ ಪ್ರೇಮವನ್ನು ಕಂಡೆವು ಹಾಗೂ ಆ ಪ್ರೀತಿ ತುಂಬಿದ ನೋಟವನ್ನು ಜೀವನಪೂರ್ತಿ ಸವಿಯಲು ನಿರ್ಧರಿಸಿದೆವು.ಸವಾಲುಗಳನ್ನು ಎದುರಿಸಿ, ದೇವರು ಹಾಗೂ ಕುಟುಂಬಸ್ಥರ ಆಶೀರ್ವಾದದೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇವೆ. ಮುಂದಿನ ದಿನಗಳಲ್ಲೂ ಪ್ರೀತಿಯು ನಮ್ಮ ಜೀವನವನ್ನು ಇನ್ನಷ್ಟು ಸುಂದರಗೊಳಿಸುತ್ತದೆ ಎಂಬ ನಂಬಿಕೆ ಇದೆ” ಎಂಬುದಾಗಿ ಅವರು ಬರೆದುಕೊಂಡಿದ್ದಾರೆ.

Ad
Ad
Nk Channel Final 21 09 2023
Ad